ಕಾರ್ಕಳ : ಸಾಣೂರು ಗ್ರಾಮದ ಪೊರ್ಲೊಟ್ಟುಗುತ್ತು ಕುಬೇರ ಕೋಳಿ ಫಾರ್ಮ್ ಬಳಿಯಿರುವ ಸರಕಾರಿ ಹಾಡಿಯಲ್ಲಿ ರಕ್ಷಿತ್ ಶೆಟ್ಟಿ, ಪ್ರವೀಣ ದೇವಾಡಿಗ ಹಾಗೂ ಇತರರು ಕೋಳಿಗಳ ಕಾಲಿಗೆ ಹಿಂಸಾತ್ಮಕ ರೀತಿಯಲ್ಲಿ ಹರಿತವಾದ ಚೂರಿಯನ್ನು ಕಟ್ಟಿ, ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ(ತನಿಕೆ) ಶಿವಕುಮಾರ್ ಅವರು ದಾಳಿ ಮಾಡಿದ್ದಾರೆ. ಜೂಜಾಟಕ್ಕೆ ಉಪಯೋಗಿಸಿದ 12,000 ರೂ. ಬೆಲೆಯ ಜೀವಂತ ಕೋಳಿಗಳು -5, ಕೋಳಿಗಳನ್ನು ಕಟ್ಟಲು ಉಪಯೋಗಿಸಿದ ಹಗ್ಗ – 5, 4,370 ರೂ. ನಗದು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕೋಳಿ ಅಂಕಕ್ಕೆ ಪೊಲೀಸ್ ದಾಳಿ































