ಕರೆನ್ಸಿ ನೋಟುಗಳ ಮೂಲಕ ಕೊರೊನಾ ವೈರಸ್‌ ಹರಡುತ್ತಿದೆಯೇ?

ದಿಲ್ಲಿ, ಸೆ. 9: ಕರೆನ್ಸಿ ನೋಟುಗಳು ಮೂಲಕ ಕೊರೊನಾ ವೈರಸ್‌ ಹರಡುತ್ತಿದೆಯೇ? ಹೀಗೊಂದು ಆತಂಕ ಈಗ ಎದುರಾಗಿರುವುದು ವ್ಯಾಪಾರಿಗಳಿಗೆ. ಕೊರೊನಾ ಸೋಂಕಿತರು ಅರಿವಿದ್ದೋ ಇಲ್ಲದೆಯೋ ಸ್ಪರ್ಷಿಸಿದ ಪ್ರತಿ ವಸ್ತವಿಗೂ ವೈರಸ್‌ ಅಂಟಿಕೊಳ್ಳುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಮೊದಲೇ ಎಚ್ಚರಿಸಿದ್ದರು. ಇದರ ಹೊರತಾಗಿಯೂ ದೇಶದಲ್ಲಿ ನಗದು ಮೂಲಕವೇ ಹೆಚ್ಚಿನ ವಹಿವಾಟುಗಳು ನಡೆಯುತ್ತಿವೆ. ಕೊರೊನಾ ಸೋಂಕು ವಿಪರೀತ ಹೆಚ್ಚಾಗಲು ಹೀಗೆ ನಡೆಯುವ ವಹಿವಾಟಿನ ಸಂದರ್ಭದಲ್ಲಿ ಬಳಕೆಯಾಗುವ ಕರೆನ್ಸಿ ನೋಟುಗಳು ಆಗಿರಬಹುದು ಎನ್ನಲಾಗುತ್ತಿದೆ.

ಲಾಕ್‌ಡೌನ್‌ ಬಳಿಕ ಮಾರುಕಟ್ಟೆಗಳು ತೆರೆಯುತ್ತಿದ್ದು ಜನರು ಶಾಪಿಂಗ್ ಮಾಡುತ್ತಿದ್ದಾರೆ.  ನಾವು ಕೊರೊನಾ ಜೊತೆಗೆ ಬದುಕುವುದನ್ನು ಕಲಿಯುತ್ತಿದ್ದೇವೆ. ನಮ್ಮ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನುವಷ್ಟರಲ್ಲೇ   ಸೋಂಕು ಕರೆನ್ಸಿ ನೋಟುಗಳ ಮೂಲಕ ಹರಡುತ್ತಿಬಹುದೇ ಎಂಬ ಆತಂಕ ಈಗ ವ್ಯಾಪಾರಿಗಳಿಗೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ  ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಪತ್ರ ಬರೆದು  ಕರೆನ್ಸಿ ನೋಟುಗಳ ಮೂಲಕ ಕೊರೊನಾ ವೈರಸ್‌ ಹರಡುವ ಸಾಧ್ಯತೆ ಇದೆ ಎಂದಾದರೆ  ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ನೀಡಬೇಕು ಎಂದು ಆಗ್ರಹಿಸಿದೆ.

ವ್ಯಾಪಾರಿಗಳ ಈ ಭಯದ ಹಿಂದೆ ಅನೇಕ ವರದಿಗಳಿವೆ. ಇದರಲ್ಲಿ ಕರೆನ್ಸಿ ನೋಟುಗಳನ್ನು ಕೊರೊನಾ  ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳ ವಾಹಕಗಳು ಎಂದು ವಿವರಿಸಲಾಗಿದೆ. ಕರೆನ್ಸಿ ನೋಟುಗಳು ವಿಭಿನ್ನ ಜನರ ಅಪರಿಚಿತ ಸರಪಳಿಯ ಮೂಲಕ ಹೆಚ್ಚಿನ ಸಂಖ್ಯೆಯ ಜನರನ್ನು ತಲುಪುತ್ತವೆ. ಇಂತಹ ಪರಿಸ್ಥಿತಿಯಲ್ಲಿ  ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಸರ್ಕಾರವು ಉದ್ಯಮಿಗಳಿಗೆ ಮತ್ತು ಜನರಿಗೆ ಈ ಕುರಿತು ಸಲಹೆಗಳನ್ನು ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರನ್ನು ಕೋರಲಾಗಿದೆ.









































































































error: Content is protected !!
Scroll to Top