ಬಾಲಿವುಡ್ ಹೀಮ್ಯಾನ್ ಧರ್ಮೇಂದ್ರ ಪ್ರತಿಭಾ ಶೋಧ (ಟ್ಯಾಲೆಂಟ್ ಹಂಟ್ ಕಂಟೆಸ್ಟ್) ವಿಜೇತರಾಗಿದ್ದರೂ ಬಾಲಿವುಡ್ ಹೀಮ್ಯಾನ್ ಧರ್ಮೇಂದ್ರ ಅವರಿಗೆ ಚಿತ್ರರಂಗದಲ್ಲಿ ಕೆಲಸ ಸಿಗುವುದು ಸುಲಭದ ಮಾತಾಗಿರಲಿಲ್ಲ.ಬಹಳಷ್ಟು ಪರದಾಟ ಮಾಡಬೇಕಾಗಿ ಬಂದಿತ್ತು.ತುಪ್ಪ- ಪರಾಟ ತಿನ್ನುತ್ತಿದ್ದ ‘ಪಂಜಾಬ್ ದ ಪುತ್ಥರ್’ ವಡಾ ಪಾವ್ ತಿಂದು ದಿನ ದೂಡಬೇಕಾಯಿತು.ಸಾಲ ನೀಡುತ್ತಿದ್ದ ಹೊಟೇಲಿನವರು ಕೊನೆಗೆ ಸಾಲದಲ್ಲಿ ಊಟ ನೀಡುವುದನ್ನೂ ನಿಲ್ಲಿಸಿದರು.ಧರ್ಮೇಂದ್ರರಿಗೆ ಊಟ ಇಲ್ಲ.ಒಂದು ರಾತ್ರಿ ಹಸಿವಿನಿಂದ ಒದ್ದಾಡುತ್ತಿದ್ದ ಅವರಿಗೆ ವಡಾ ಪಾವ್ ತಿನ್ನುವುದಕ್ಕೂ ಹಣ ಇರಲಿಲ್ಲ.ಮನೆಯಲ್ಲಿ ಕೇವಲ ಇಸಬ್ ಗೋಲ್ ಇತ್ತು.ಇದ್ದ ಎಲ್ಲವನ್ನೂ ನೀರಲ್ಲಿ ಹಾಕಿ ಕಲಸಿ ಕುಡಿದು ಬಿಟ್ಟರು.ಬೆಳಿಗ್ಗೆ ಅವರನ್ನು ಮಿತ್ರ ಆಸ್ಪತ್ರೆಗೆ ದಾಖಲಿಸಿದರು.
ಏಳಿಂಜೆ ನಾಗೇಶ್ 98929 80750




















