ದಳಪತಿಯ ಬಹುಮತಕ್ಕೆ 2 ಸ್ಥಾನ ಕೊರತೆ – ‌ಇಂದೂ ವಿಜಯ್ ಪದಗ್ರಹಣ ಡೌಟ್‌ !

ಚೆನ್ನೈ : ಟಿವಿಕೆ ಅಧ್ಯಕ್ಷ ವಿಜಯ್‌ ನಿನ್ನೆ 3ನೇ ಬಾರಿ ರಾಜ್ಯಪಾಲರನ್ನ ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ ಬಹುಮತದ ಮ್ಯಾಜಿಕ್ ನಂಬರ್ ಸುತ್ತಲಿನ ಅನಿಶ್ಚಿತತೆ ಮಾತ್ರ ಮುಂದುವರಿದಿದೆ.

ವಿಜಯ್ ನಿನ್ನೆ ರಾಜಭವನದಲ್ಲಿ ರಾಜ್ಯಪಾಲ ಆರ್.ವಿ ಅರ್ಲೇಕರ್ ಅವರನ್ನ ಭೇಟಿಯಾಗಿ, ತಮ್ಮ ಬಳಿ 116 ಶಾಸಕರ ಬೆಂಬಲವಿದೆ ಎಂದು ಪತ್ರ ಸಲ್ಲಿಸಿದ್ದಾರೆ. ಆದರೆ ವಿಜಯ್ ಪಕ್ಷಕ್ಕೆ ಇನ್ನೂ 2 ಸ್ಥಾನಗಳ ಕೊರತೆ ಇರುವುದು ಕಂಡುಬಂದಿದೆ. ಆದ್ದರಿಂದ ದಳಪತಿ ವಿಜಯ್‌ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವುದು ಇಂದೂ ಕೂಡ ಅನುಮಾನವಾಗಿದೆ. ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ಬಹುಮತ ಸಾಬೀತುಪಡಿಸಲು 118 ಶಾಸಕರ ಅಗತ್ಯವಿದೆ.

ವಿಸಿಕೆ ಷರತ್ತು
ಟಿವಿಕೆಗೆ ಬೆಂಬಲಿಸುವ ಬಗ್ಗೆ ವಿಸಿಕೆ ಪಕ್ಷ ಇಂದು ಅಧಿಕೃತವಾಗಿ ಘೋಷಿಸಲಿದೆ. ತಡರಾತ್ರಿ ವಿಜಯ್ ನಿವಾಸಕ್ಕೆ ಆಗಮಿಸಿದ್ದ ವಿಸಿಕೆ ಪಕ್ಷದ ನಾಯಕರು ಬೆಂಬಲ ನೀಡಬೇಕಾದರೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಷರತ್ತು ಇಟ್ಟಿದ್ದಾರೆ.

  • ಬೇಡಿಕೆಗಳು
    ಉಪಮುಖ್ಯಮಂತ್ರಿ ಜೊತೆಗೆ ಸಚಿವ ಸ್ಥಾನ
    ಸಂಸದ ತಿರುಮಾವಲವನ್‌ಗೆ ಡಿಸಿಎಂ ಹುದ್ದೆ
    ವಿಜಯ್‌ರಿಂದ ತೆರವಾಗುವ ಕ್ಷೇತ್ರದಿಂದ ಸ್ಪರ್ಧೆ
    ಎಸ್‌ಸಿ ಕಲ್ಯಾಣಕ್ಕಾಗಿ ಶಾಸಕಾಂಗ ಕಾಯ್ದೆ

ಹೀಗೆ ವಿಜಯ್ ಮುಂದೆ ಬೇಡಿಕೆಗಳನ್ನು ಇಟ್ಟಿರುವ ವಿಸಿಕೆ ತಮ್ಮ ಬೇಡಿಕೆ ಒಪ್ಪಿದ್ರೆ ಮಾತ್ರ ಬೆಂಬಲ ಎಂದಿದೆ. ವಿಜಯ್‌ಗೆ ಗಡುವು ನೀಡಿರುವ ವಿಸಿಕೆ ಇಂದು ಅಧಿಕೃತವಾಗಿ ಬೆಂಬಲ ಘೋಷಿಸುವ ಸಾಧ್ಯತೆಯಿದೆ. ಸದ್ಯ ವಿಜಯ್ ಪಕ್ಷಕ್ಕೆ ವಿಸಿಕೆ ಹೊರತು 116 ಶಾಸಕರ ಬೆಂಬಲ ಇದೆ. ವಿಸಿಕೆ ಬೆಂಬಲ ಖಾತ್ರಿಯಾದರೆ 118 ಶಾಸಕರ ಬಲ ಆಗಲಿದೆ.









































































































error: Content is protected !!
Scroll to Top