ಗಾಳಿ ಮಳೆಗೆ ಕಾರ್ಕಳದ ವಿವಿಧೆಡೆ ಹಾನಿ

ಕಾರ್ಕಳ : ಶುಕ್ರವಾರ ಸಂಜೆ ಕಾರ್ಕಳ ತಾಲೂಕಿನ ಹಲವೆಡೆ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ.
ಕಲ್ಯಾ ಗ್ರಾಮದ ಅಶೋಕ ನಗರದ ಚಂದ್ರಶೇಖರ್ ಆಚಾರ್ಯ ಅವರ ಮನೆಗೆ ಸಿಡಿಲು ಬಡೆದು ಅಂದಾಜು 10 ಸಾ.ರೂ. ನಷ್ಟ, ಬಂಗ್ಲೆಗುಡ್ಡೆ ಸದ್ಭಾವನ ನಗರದ ಮಾಧವ ಅವರ ಮನೆಗೆ ಮರ ಬಿದ್ದು 10 ಸಾ.ರೂ. ನಷ್ಟ, ಕಡ್ತಲ ಗ್ರಾಮದ ಆನಂದ ನಾಯಕ್ ಅವರ ಅಡಿಕೆ ತೋಟದ ಅಡಿಕೆ ಮರಗಳು ತುಂಡಾಗಿ ನಾಶವಾಗಿದ್ದು 10 ಸಾ. ರೂ. ನಷ್ಟ ಹಾಗೂ ಕುಕ್ಕುಂದೂರು ಗ್ರಾಮದ ನಡಿಬೆಟ್ಟುವಿನ ದಿನೇಶ್ ಎಂಬುವರ ಮನೆಗೆ ಸಿಡಿಲು ಬಡಿದು 15000 ರೂ. ನಷ್ಟ, ಕುಕ್ಕುಂದೂರು ಗ್ರಾಮದ ಕೇರ್ದಡ್ಡು ಸುಂದರಿಯವರ ಮನೆ ಮೇಲೆ ಮರ ಬಿದ್ದು 8000 ರೂ.ಯಷ್ಟು ನಷ್ಟ ಸಂಭವಿಸಿದೆ.





























































































































error: Content is protected !!
Scroll to Top