ಕೋಲ್ಕತ್ತ : ಪಶ್ಚಿಮ ಬಂಗಾಳದಲ್ಲಿ ದಿಗ್ವಿಜಯ ಸಾಧಿಸಿರುವ ಬಿಜೆಪಿ ಈಗ ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಪಶ್ಚಿಮ ಬಂಗಾಳ ಸಿಎಂ ರೇಸ್‌ನಲ್ಲಿ ಮೂವರ ಹೆಸರು ಕೇಳಿಬರುತ್ತಿದ್ದು, ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಸುವೇಂದು ಅಧಿಕಾರಿ ಅವರಿಗೆ ಈ ಪಟ್ಟಕಟ್ಟುವ ಸಾಧ್ಯತೆ ದಟ್ಟವಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸ್ಥಾನಕ್ಕೆ ಸಮಿಕ್ ಭಟ್ಟಾಚಾರ್ಯ, ಸುವೇಂದು ಅಧಿಕಾರಿ ಮತ್ತು ದಿಲೀಪ್ ಘೋಷ್ ಅವರ ಹೆಸರುಗಳು ಮುಂಚೂಣಿಯಲ್ಲಿದೆ.
ಮೇ 9ರಂದು ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಇದೇ ವೇಳೆ ಇತರ ಪ್ರಮುಖ ಸಚಿವರೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಎರಡು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸುವ ಕುರಿತು ಬಿಜೆಪಿ ಹೈಕಮಾಂಡ್ ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಆಡಳಿತದಲ್ಲಿ ಸುವೇಂದು ಅಧಿಕಾರಿ ಅವರಿಗೆ ನೆರವಾಗಲು, ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸುವುದು ಬಿಜೆಪಿ ಯೋಜನೆಯಾಗಿದೆ. ಆದರೆ, ಡಿಸಿಎಂ ಹುದ್ದೆ ಅಲಂಕರಿಸಲಿರುವ ಆ ಇಬ್ಬರು ಯಾರು ಎಂಬುದನ್ನು ಬಿಜೆಪಿ ದೃಢಪಡಿಸಿಲ್ಲ.
ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳ ಸಿಎಂ ? ಇಬ್ಬರಿಗೆ ಡಿಸಿಎಂ ಹುದ್ದೆ !
























