ದೈನಂದಿನ ಬದುಕಿನಲ್ಲಿ ಜೊತೆಯಾಗುವವರಿಗೆ ಕೃತಜ್ಞತೆ ಸಲ್ಲಿಸಿ ಹುಟ್ಟುಹಬ್ಬ ಸಂಭ್ರಮ

ಕಾರ್ಕಳ : ಶಾಸಕ ವಿ. ಸುನಿಲ್‌ ಕುಮಾರ್‌ ಅವರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಅವರು ತಮ್ಮ ದೈನಂದಿನ ಬದುಕಿನಲ್ಲಿ ಜೊತೆಯಾಗುವವರಿಗೆ ಕೃತಜ್ಞತೆ ಸಲ್ಲಿಸಿ ಸಹಭೋಜನದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಈ ಬಗ್ಗೆ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಫೇಸ್‌ಬುಕ್‌ ಪೋಸ್ಟ್‌
ʼʼಅವಿಸ್ಮರಣೀಯ…
ಕುಟುಂಬದ ವಿಶೇಷ ಬಂಧುಗಳೊಂದಿಗಿನ ಭಾವನಾತ್ಮಕ ಬೆಸುಗೆಯ ಹುಟ್ಟುಹಬ್ಬದ ಸಂಭ್ರಮ….
ಇಂದು ನನ್ನ ಹುಟ್ಟುಹಬ್ಬವನ್ನು ಮನೆಯ ದಿನಸಿ ಸಾಮಗ್ರಿಗಳನ್ನು ಒದಗಿಸುವ ಹಿರಿಯರಾದ ದೇವಣ್ಣರನ್ನು ಒಳಗೊಂಡು ನಮ್ಮ ಆರೋಗ್ಯದ ಕಾಳಜಿವಹಿಸುವ ವೈದ್ಯರುಗಳಾದ ಡಾ.ಕಾರ್ತಿಕ್‌ ರಾವ್‌, ಡಾ. ಮೃಣಾಲ್, ಕಛೇರಿ ಸಿಬ್ಬಂದಿಗಳು, ಸಹಾಯಕರು, ದಿನನಿತ್ಯ ನಮ್ಮ ಮನೆಗೆ ಹಾಲು-ಪೇಪರ್‌, ಮೀನು-ಮಾಂಸ, ತರಕಾರಿ-ಹೂ-ಹಣ್ಣು ನೀಡುವವರು, ನನ್ನ ಮಗನ ಟ್ಯೂಷನ್‌ ಟೀಚರ್‌, ತುರ್ತು ಪ್ರಯಾಣಕ್ಕೆ ಸಹಕರಿಸುವ ಆಟೋ ರಿಕ್ಷಾದವರು, ಸ್ವಚ್ಛತೆಯನ್ನು ಕಾಪಾಡುವ ಕಸ ಸಂಗ್ರಹಗಾರರು, ಇಲೆಕ್ಟ್ರೀಷಿಯನ್‌, ಸುಂದರವಾದ ವಸ್ತ್ರಗಳನ್ನು ಸಿದ್ದಪಡಿಸುವ ಟೈಲರ್‌, ಬಟ್ಟೆಯನ್ನು ಅಚ್ಚುಕಟ್ಟಾಗಿಸುವ ಐರನ್‌ ಮಾಡುವವರು, ಕೇಬಲ್‌ ಜೊತೆಗೆ ದಿನನಿತ್ಯದ ನಮ್ಮ ಕುಟುಂಬದ ಜೊತೆ ನಿಂತ ಪ್ರತಿನಿತ್ಯದ ಒಡನಾಟದ ಬಂಧುಗಳೊಂದಿಗೆ ಹುಟ್ಟುಹಬ್ಬದ ಸಂತೋಷವನ್ನು ಸಂಭ್ರಮಿಸಲಾಯಿತು.
ನಮ್ಮ ಬದುಕನ್ನು ಸುಂದರವಾಗಿಸುವುದು ದೊಡ್ಡ ದೊಡ್ಡ ಸಂಬಂಧಗಳಷ್ಟೇ ಅಲ್ಲ… ಪ್ರತಿನಿತ್ಯದ ನಮ್ಮ ಬದುಕಿನಲ್ಲಿ ಹೀಗೆ ಬೆಸೆದುಕೊಳ್ಳುವ ಈ ಸಣ್ಣ ಸಣ್ಣ ಆತ್ಮೀಯತೆಗಳೇ ನಿಜವಾದ ಭಾಂಧವ್ಯಗಳು..
ಹುಟ್ಟುಹಬ್ಬದ ಸಂಭ್ರಮಕ್ಕಿಂತ, ಪ್ರತಿನಿತ್ಯ ನನ್ನೊಂದಿಗೆ ನನ್ನ ಕುಟುಂಬದವರೊಂದಿಗೆ ಜೊತೆಯಾಗಿ ನಿಂತವರೊಂದಿಗೆ ಕೆಲವು ಹೊತ್ತು ಸಂಭ್ರಮಿಸಿ ಕುಶಲೋಪರಿ ಮಾತುಗಳನ್ನು ಆಡಿ ಸಹಭೋಜನದೊಂದಿಗೆ ಸಂತೋಷವನ್ನು ಹಂಚಿಕೊಂಡ ಕ್ಷಣವೇ ಈ ಹುಟ್ಟುಹಬ್ಬದ ನಿಜವಾದ ವಿಶೇಷತೆ ಎಂದು ನನಗಿಸಿತು.ʼʼ ಎಂಬುದಾಗಿ ಸಂಭ್ರಮವನ್ನು ಬರಹದ ಮೂಲಕ ಹಂಚಿಕೊಂಡಿದ್ದಾರೆ.

https://www.facebook.com/share/p/1KJPxcyR5r





























































































































error: Content is protected !!
Scroll to Top