ಕರ್ನಾಟಕದಲ್ಲಿ ಕ್ವಾರಿ (ಕಲ್ಲು ಗಣಿಗಾರಿಕೆ)

ಕರ್ನಾಟಕದಲ್ಲಿ ಕ್ವಾರಿ ಅಂದರೆ ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಪುಡಿ ಮಾಡುವ ಘಟಕ (ಕ್ರಷರ್) ಗಳನ್ನು ನಿಯಂತ್ರಿಸಲು ಪ್ರತ್ಯೇಕವಾದ ಕಾನೂನುಗಳು ಜ್ಯಾರಿಯಲ್ಲಿರುತ್ತದೆ. ಮಾತ್ರವಲ್ಲದೇ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು ಸಹಾ ಜ್ಯಾರಿಯಲ್ಲಿರುತ್ತದೆ. ಇದರಂತೆ ಯಾವುದೇ ಭೂಮಿಯಲ್ಲಿ ಸರಕಾರಿ ಅಥವಾ ಖಾಸಗಿ ಒಡೆತನದ ಭೂಮಿಯಲ್ಲಿ ಯಾವುದೇ ವ್ಯಕ್ತಿ ಸರಕಾರದ ಅನುಮತಿಯಿಲ್ಲದೆ ಕಲ್ಲು ಅಥವಾ ಇತರ ಉಪ ಖನಿಜಗಳ ಕ್ವಾರಿ ಕೆಲಸ ಮಾಡುವಂತಿಲ್ಲ. ಕಾನೂನಿನ ನಿಯಮಾನುಸಾರದ ಪ್ರಕಾರ ಅರಣ್ಯ ಪ್ರದೇಶಗಳನ್ನು ಮತ್ತು ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಮತ್ತ್ತು ಇತರ ಪರಿಸರ ಸಂರಕ್ಷಿತ ವಲಯಗಳನ್ನು ರಕ್ಷಿಸುವ ಉದ್ದೇಶದಿಂದ ಇಂತಹ ವಲಯಗಳಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಪುಡಿ ಮಾಡುವ ಘಟಕ (ಕ್ರಷರ್) ಗಳ ಕಾರ್ಯಚರಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುತ್ತದೆ.

ಕರ್ನಾಟಕ ಕಲ್ಲು ಪುಡಿ ಮಾಡುವ ಘಟಕ (ಸ್ಟೋನ್ ಕ್ರರ‍್ಸ್) ನಿಯಂತ್ರಣ ಕಾಯ್ದೆ 2011ರ ಪ್ರಕಾರ ಕಲ್ಲು ಪುಡಿ ಮಾಡುವ ಘಟಕ (ಸ್ಟೋನ್ ಕ್ರರ‍್ಸ್)ಗಳನ್ನು ಕೇವಲ ನಿಗದಿತ ಸುರಕ್ಷಿತ ವಲಯಗಳಲ್ಲಿ ಮಾತ್ರ ಸ್ಥಾಪಿಸಬಹುದಾಗಿದೆ. ಮಾತ್ರವಲ್ಲದೇ ಈ ರೀತಿಯ ಘಟಕಗಳನ್ನು ಸ್ಥಾಪಿಸುವುದಕ್ಕಿಂತ ಮುಂಚಿತವಾಗಿ ಕರ್ನಾಟಕ ಸರಕಾರದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯಚರಣೆಗೋಸ್ಕರ ಲಿಖಿತ ಸಮ್ಮತಿಯನ್ನು ಪಡೆಯುವುದು ಕಡ್ಡಾಯವಾದ ನಿಯಮಗಳ ಪೈಕಿ ಒಂದಾಗಿರುತ್ತದೆ. ಈ ರೀತಿಯಾಗಿ ಕ್ವಾರಿ ಚಟುವಟಿಕೆಗಳ ಬಗ್ಗೆ ಕಾರ್ಯಚರಣೆ ಕುರಿತು ಸಮ್ಮತಿಯನ್ನು ನೀಡುವ ಸಂದರ್ಭದಲ್ಲಿ ಸರಕಾರವು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಮತ್ತು ಜಲಾಶಯಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗಿರುವುದು ಸರಕಾರದ ಜವಾಬ್ದಾರಿಯಾಗಿರುತ್ತದೆ. ಈ ಉದ್ದೇಶದಿಂದ ರಾಜ್ಯದಲ್ಲಿ ಕಲ್ಲು ಪುಡಿ ಮಾಡುವ ಘಟಕಗಳ ಸ್ಥಾಪನೆ ಮತ್ತು ಪರವಾನಗಿ ಪಡೆಯುವುದಕ್ಕಾಗಿ ಸಂಬಂಧಪಟ್ಟ ವ್ಯಕ್ತಿಯು ಜಿಲ್ಲಾ ಪ್ರಾಧಿಕಾರದಿಂದ ಮತ್ತು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿಯನ್ನು ಪಡೆಯುವುದು ಅತ್ಯಾಗತ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಉದ್ದೇಶಿತ ಕಲ್ಲು ಪುಡಿ ಮಾಡುವ ಘಟಕಗಳ ಸ್ಥಾಪನೆಯ ಪ್ರದೇಶವು ಸುರಕ್ಷಿತ ವಲಯ ಅಂದರೆ ಜನವಸತಿ ಪ್ರದೇಶಗಳು, ರಾಷ್ಟ್ರೀಯ ಹೆದ್ದಾರಿಗಳು, ನದಿಗಳು, ಧಾರ್ಮಿಕ ಸ್ಥಳಗಳಿಂದ ನಿರ್ದಿಷ್ಟ ದೂರದಲ್ಲಿ ಇದೆಯೋ ಎಂಬ ಬಗ್ಗೆ ಪರಿಶೀಲಿಸಿ ಸುರಕ್ಷಿತ ವಲಯದಲ್ಲಿ ಮಾತ್ರ ಕ್ರಷರ್ ಸ್ಥಾಪನೆ ಕುರಿತು ಪರವಾನಗಿಯನ್ನು ನೀಡುವ ಅಧಿಕಾರವನ್ನು ಸಂಬಂಧಪಟ್ಟ ಜಿಲ್ಲಾ ಪ್ರಾಧಿಕಾರವು ಹೊಂದಿರುತ್ತದೆ.

ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ನಡೆಸುವ ಯಾವುದೇ ಕ್ವಾರಿ ಅಥವಾ ಕ್ರಷರ್ ಚಟುವಟಿಕೆಯು ಶಿಕ್ಷಾರ್ಹ ಅಪರಾಧವಾಗಿದ್ದು ಇದರಲ್ಲಿ ಭಾಗಿವಾಗುವ ಪ್ರತಿಯೊಬ್ಬ ವ್ಯಕ್ತಿಯು ಜೈಲು ಶಿಕ್ಷೆಗೆ ಮತ್ತು ದಂಡ ಪಾವತಿಗೆ ಗುರಿಯಾಗಬೇಕಾಗುತ್ತದೆ. ಮಾತ್ರವಲ್ಲದೇ ಕಾನೂನು ಬಾಹಿರವಾಗಿ ಕ್ವಾರಿ ಅಥವಾ ಕ್ರಷರ್ ಕಾರ್ಯಾಚರಣೆ ಬಗ್ಗೆ ಉಪಯೋಗಿಸುವ ಯಾವುದೇ ವಾಹನವನ್ನು ಮುಟ್ಟುಗೋಲು ಹಾಕುವ ಅಥವಾ ಪರವಾನಗಿಯನ್ನು ರದ್ದುಪಡಿಸುವ ಅಧಿಕಾರವನ್ನು ಸರಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೊಂದಿರುತ್ತದೆ.

























































































































error: Content is protected !!
Scroll to Top