ಶ್ರೀ ಶಂಕರ ಪ್ರತಿಷ್ಠಾನದ ವತಿಯಿಂದ ಆಷಾಡದಲ್ಲಿ ಒಂದು ದಿನ ಕಾರ್ಯಕ್ರಮ

ಕಾರ್ಕಳ : ಕಾರ್ಕಳ ಶ್ರೀ ಶಂಕರ ಪ್ರತಿಷ್ಠಾನದ ವತಿಯಿಂದ “ಆಷಾಡದಲ್ಲಿ ಒಂದು ದಿನ ಕಾರ್ಯಕ್ರಮ ಭಾನುವಾರ ತೆಳ್ಳಾರು ರಸ್ತೆ ಕಸ್ತೂರಿ ರಂಗಮಂಟಪದಲ್ಲಿ ಜರುಗಿತು. ಈ ವೇಳೆ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಚೆನ್ನಮಣೆ, ಕೇರಂ, ಲೂಡೋ, ಕೆರೆದಡ, ಸಂಗೀತ ಕುರ್ಚಿ ಮೊದಲಾದ ಸ್ಪರ್ಧೆ ನಡೆಯಿತು.
ಇದೇ ಸಂದರ್ಭ ಸಮಾಜದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕಾಗಿ 30 ಸಾವಿರ ರೂ. ಧನ ಸಹಾಯ ನೀಡಲಾಯಿತು. ಸುಮಾರು 50 ಬಗೆಯ ಆಷಾಡದ ತಿನಿಸು ಆಗಮಿಸಿದವರ ಗಮನ ಸೆಳೆಯಿತು. ಪ್ರತಿಷ್ಠಾನದ ಅಧ್ಯಕ್ಷ ಪದ್ಮನಾಭ ಭಂಡಿ ಸ್ವಾಗತಿಸಿ, ಕಾರ್ಯದರ್ಶಿ ಕರ್ವಾಲು ಸತೀಶ್ ರಾವ್ ನಿರೂಪಿಸಿ, ವಂದಿಸಿದರು.























































error: Content is protected !!
Scroll to Top