ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ : ಭೂಸ್ಥಿರ ಕಕ್ಷೆಯಿಂದ ಚಿತ್ರಗಳನ್ನು ಸೆರೆಹಿಡಿಯುವ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಹೊತ್ತ GSLV-F17 ರಾಕೆಟ್ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾಯಿಸಿದೆ.

ಈ ಮೂಲಕ ಇಸ್ರೋ ಭಾರತದ ಮೊಟ್ಟಮೊದಲು EOS-05 ಇಮೇಜಿಂಗ್‌ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ನಡೆಸಿದೆ. ಚೆನ್ನೈನಿಂದ ಸುಮಾರು 135 ಕಿ.ಮೀ ದೂರದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ 2ನೇ ಲಾಂಚ್‌ ಪ್ಯಾಡ್‌ನಿಂದ, 51.7 ಮೀಟರ್‌ ಎತ್ತರದ ರಾಕೆಟ್ ಅನ್ನು ಶುಕ್ರವಾರ ನಸುಕಿನ 2.55ಕ್ಕೆ ಉಡಾವಣೆ ಮಾಡಲಾಗಿದೆ. ಇದನ್ನು ಜಿಎಸ್‌ಎಲ್‌ವಿ–ಎಫ್‌17/ಇಒಎಸ್–05 ಮಿಷನ್‌’ ಎಂದು ಹೆಸರಿಸಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನೀಡಿದ ಮಾಹಿತಿಯಂತೆ ಈ ಇಒಎಸ್–05 ಮಿಷನ್‌ ಅತ್ಯಾಧುನಿಕ ತಂತ್ರಜ್ಞಾನದ ಭೂ ವೀಕ್ಷಣಾ ಉಪಗ್ರಹವಾಗಿದ್ದು ಜಿಯೋಸಿಂಕ್ರೋನಸ್ (Geosynchronous) ಕಕ್ಷೆಯಿಂದ ಭೂಮಿಯ ಚಿತ್ರಣಗಳನ್ನು ಸೆರೆಹಿಡಿಯಲಿರುವ ಭಾರತದ ಪ್ರಥಮ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಳೆಯ ನಡುವೆಯೂ ನಿಗದಿತ ಸಮಯಕ್ಕೆ ಯಶಸ್ವಿಯಾಗಿ ರಾಕೆಟ್ ಆಕಾಶಕ್ಕೆ ಚಿಮ್ಮಿದೆ. ಜಿಎಸ್‌ಎಲ್‌ವಿ ರಾಕೆಟ್‌ ಮೂಲಕ ನಡೆಸಲಾಗುತ್ತಿರುವ 19ನೇ ಉಡಾವಣೆ ಇದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೊ ಅಧ್ಯಕ್ಷ ಡಾ. ವಿ. ನಾರಾಯಣನ್, ಜಿಎಸ್‌ಎಲ್‌ವಿ–ಎಫ್‌17/ಇಒಎಸ್–05 ಮಿಷನ್‌ ಯಶಸ್ವಿಯಾಗಿದೆ. ಉಪಗ್ರಹವು ನಿಖರವಾಗಿ ಉದ್ದೇಶಿತ ಕಕ್ಷೆ ಸೇರಿಸಿದೆ ಎಂದು ತಿಳಿಸಿದ್ದಾರೆ.

























































error: Content is protected !!
Scroll to Top