ರಾಜ್ಯದಲ್ಲಿ SIR ಇದುವರೆಗೆ 7.31 ಲಕ್ಷ ಮತದಾರರಿಗೆ ನೋಟಿಸ್‌ ವಿತರಣೆ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೋಟಿಸ್‌ ವಿತರಣೆಯನ್ನು ಆರಂಭಿಸಿದೆ.
ಅನ್ ಮ್ಯಾಪಿಂಗ್ ‌ಮತ್ತು ಗೊಂದಲಮಯ ಆಗಿರುವವರಿಗೆ ನೋಟಿಸ್ ನೀಡಲು ಚುನಾವಣಾ ಆಯೋಗ ಮುಂದಾಗಿದೆ. ಇದುವರೆಗೂ 7.31 ಲಕ್ಷ ಮತದಾರರಿಗೆ ನೋಟಿಸ್ ವಿತರಿಸಲಾಗಿದೆ. ಒಟ್ಟು 43,81,143 ಮತದಾರರಿಗೆ ನೋಟಿಸ್ ನೀಡುವ ಗುರಿ ಹೊಂದಲಾಗಿದೆ. 7,31,770 ಮತದಾರರಿಗೆ ಸದ್ಯಕ್ಕೆ ನೋಟಿಸ್ ನೀಡಲಾಗಿದೆ. ಇನ್ನೂ 36,49,373 ಮತದಾರರಿಗೆ ನೋಟಿಸ್ ವಿತರಿಸುವುದು ಬಾಕಿ ಇದೆ. ನೋಟಿಸ್ ನೀಡಿದ 206 ಮಂದಿಯನ್ನ ಮಾತ್ರ ವಿಚಾರಣೆ ಮಾಡಲಾಗಿದೆ.

ಸೆಪ್ಟೆಂಬರ್ 24 ರ‌ ಒಳಗೆ ನೋಟಿಸ್ ಪಡೆದು ಚುನಾವಣಾ ಆಯೋಗಕ್ಕೆ ದಾಖಲೆ ಸಮೇತ ರಿಪ್ಲೈ ನೀಡಬೇಕಿದೆ. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ, ತಿದ್ದುಪಡಿ, ಬದಲಾವಣೆಗೆ ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆಯಾಗಿತ್ತು. 9,45,968 ಮಂದಿ ಫಾರಂ6, ಫಾರಂ6A, ಫಾರಂ7, ಪಾರಂ8ಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

















































error: Content is protected !!
Scroll to Top