ಉಡುಪಿ ಜಿಲ್ಲಾ ಪ್ರಥಮ ಮಹಿಳಾ ಪೈಲಟ್‌ ಆಗಿ ಕೌಡೂರಿನ ಶೈನಿ ಅಸ್ಮಾ ಸಲ್ಡಾನ

ಕಾರ್ಕಳ : ಕೌಡೂರಿನ ಶೈನಿ ಅಸ್ಮಾ ಸಲ್ಡಾನ ಅವರು ಪೈಲಟ್‌ ತರಬೇತಿ ಪೂರ್ಣಗೊಳಿಸಿ ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ ಪಡೆದುಕೊಳ್ಳುವುದರೊಂದಿಗೆ ಉಡುಪಿ ಜಿಲ್ಲೆಗೆ ಪ್ರಥಮ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶೈನಿ ಅಸ್ಮಾ ಸಲ್ಡಾನ ಅವರು ಕೌಡೂರು ರಂಗನಪಲ್ಕೆಯ ಅಶೋಕ್‌ ಜಾಕೋಬ್‌ ಸಲ್ಡಾನ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ ದಂಪತಿಯ ಪುತ್ರಿ. ಪಿಯುಸಿಯವರೆಗಿನ ಶಿಕ್ಷಣವನ್ನು ಕಾರ್ಕಳ ಕ್ರೈಸ್ಟ್‌ಕಿಂಗ್‌ ವಿದ್ಯಾಸಂಸ್ಥೆಯಲ್ಲಿ ಪೂರೈಸಿರುತ್ತಾರೆ. ಬಳಿಕ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್‌ ಅಕಾಡೆಮಿಗೆ ಬೆಂಗಳೂರಿನಲ್ಲಿ ಎಂಟ್ರೆನ್ಸ್‌ ಎಕ್ಸಾಂ ಬರೆದು ತೇರ್ಗಡೆ ಹೊಂದಿ 2023ರ ಆಗಸ್ಟ್‌ನಿಂದ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್‌ ಅಕಾಡೆಮಿಯಲ್ಲಿ ತರಬೇತಿ ಪಡೆದು ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ ಪಡೆದುಕೊಂಡಿದ್ದಾರೆ.































error: Content is protected !!
Scroll to Top