ಕಾರ್ಕಳ : ನಮ್ಮನ್ನು ನಾವು ಸುಸ್ಥಿತಿಯಲ್ಲಿ ಇರಿಸಿಕೊಂಡು ನಿಯಮಿತ ವ್ಯಾಯಾಮ ಮಾಡಿದಲ್ಲಿ ಬೊಜ್ಜು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ದೀರ್ಘಕಾಲಿಕ ಬೆನ್ನು ನೋವು ದೂರವಿಡಬಹುದು ಎಂದು ಡಾ. ಸ್ನೇಹಾ ಎಸ್. ದಾಂಬ್ಲೆ ಹೇಳಿದರು.
ಅವರು ತೆಳ್ಳಾರು ರಸ್ತೆ ಚಿಪ್ಳೂಂಕರ್ ಅವರ ನಿವಾಸದಲ್ಲಿ ನಡೆದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಎಪ್ರಿಲ್ ತಿಂಗಳ ಕಾರ್ಯಕ್ರಮದಲ್ಲಿ ಆರೋಗ್ಯ ಜಾಗೃತಿ ಮಾಲಿಕೆಯಲ್ಲಿ ನೋವು ನಿವಾರಣೆ ಹಾಗೂ ಫಿಝಿಯೊಥೆರಪಿ ಕುರಿತು ಉಪನ್ಯಾಸ ನೀಡಿದರು.
ಕೀರ್ತಿ ಆಪ್ಟೆ ಪ್ರಾರ್ಥಿಸಿದರು. ಸಂಘಟನೆಯ ಅಧ್ಯಕ್ಷೆ ಶ್ಯಾಮಲಾ ಗೋಪಿನಾಥ್ ಸ್ವಾಗತಿಸಿದರು. ಅನುಪಮಾ ಚಿಪ್ಳೂಂಕರ್ ಅವರು ಸದಸ್ಯೆಯರಿಗೆ ಪುಸ್ತಕ ಬಾಗಿನ ನೀಡಿ ಸತ್ಕರಿಸಿದರು. ಕಾರ್ಯದರ್ಶಿ ರೂಪಾ ಚಿಪ್ಳೂಂಕರ್ ನಿರ್ವಹಿಸಿದರು. ಸುಲೋಚನಾ ಬಿ. ವಿ. ವಂದಿಸಿದರು.
ನಿಯಮಿತ ವ್ಯಾಯಾಮದಿಂದ ಆರೋಗ್ಯ ರಕ್ಷಣೆ – ಡಾ. ಸ್ನೇಹಾ ದಾಂಬ್ಲೆ





