ಸಿ.ಎ. ಫೌಂಡೇಶನ್ ಪರೀಕ್ಷೆ – ಕ್ರೈಸ್ಟ್‌ಕಿಂಗ್‌ನ ಶ್ರೀಮಾ ದೇವಾಡಿಗ ತೇರ್ಗಡೆ

ಕಾರ್ಕಳ : ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯವರು(ಐಸಿಎಐ) 2026ರ ಜೂನ್ ತಿಂಗಳಿನಲ್ಲಿ ನಡೆಸಿದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಕ್ರೈಸ್ಟ್‌ಕಿಂಗ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀಮಾ ದೇವಾಡಿಗ 293 ಅಂಕ ಗಳಿಸಿ ತೇರ್ಗಡೆಯಾಗಿದ್ದಾರೆ. ಕ್ರೈಸ್ಟ್‌ಕಿಂಗ್‌ ಕಾಲೇಜಿನಲ್ಲಿಯೇ ತರಬೇತಿ ಪಡೆದಿದ್ದು, ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶದಲ್ಲಿಯೂ ಶ್ರೀಮಾ ದೇವಾಡಿಗ 596 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ಐದನೇ ರ‍್ಯಾಂಕ್ ಪಡದುಕೊಂಡಿದ್ದರು. ಇವರು ತೆಳ್ಳಾರು 12ನೇ ಅಡ್ಡರಸ್ತೆ ನಿವಾಸಿ ಸಂತೋಷ ದೇವಾಡಿಗ ಮತ್ತು ಸುಮಂಗಲಾ ದೇವಾಡಿಗ ದಂಪತಿಯ ಪುತ್ರಿ. ಸಾಧಕ ವಿದ್ಯಾರ್ಥಿನಿಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಉಪನ್ಯಾಸಕರು ಅಭಿನಂದಿಸಿದ್ದಾರೆ.









error: Content is protected !!
Scroll to Top