ರಾಜಕೀಯ ಭಿನ್ನಾಭಿಪ್ರಾಯಗಳನ್ನು ವೈಯಕ್ತಿಕ ನಿಂದನೆ ಮೂಲಕ ತೀರಿಸಿಕೊಳ್ಳುವುದು ‌ಸರಿಯಲ್ಲ: ಬಿಜೆಪಿ

ಕಾರ್ಕಳ: ನಗರದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊಂದಿತ್ತೇ ಹೊರತು, ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ನಿಂದನೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಕಾರ್ಕಳ ಕಾಂಗ್ರೆಸ್‌ನ ಅಪಹಾಸ್ಯ ನಡೆ ಖಂಡನೀಯ. ಇವರ ಪ್ರತಿಭಟನೆಯಲ್ಲಿ ಕಾರ್ಕಳದ ಉದ್ಯಮಿಗಳು, ಸಂಸ್ಥೆಗಳನ್ನು ಅಪಹಾಸ್ಯ ಮಾಡುವ ರೀತಿಯಲ್ಲಿತ್ತು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸಾರ್ವಜನಿಕ ಸಂಸ್ಥೆ, ಉದ್ಯಮಿಗಳ ಗೌರವಕ್ಕೆ ಧಕ್ಕೆ ತರುವುದು ಸರಿಯಾದ ನಡೆಯಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಮುಖಂಡ ಮಣಿರಾಜ ಶೆಟ್ಟಿ ಹೇಳಿದರು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಟ್ಟೆಯ ಗ್ರಾಮೀಣ ಭಾಗದಲ್ಲಿರುವ ಮೌಲ್ಯವರ್ಧಿತ ಉತ್ಪನ್ನಗಳು ದೇಶದ ವಿವಿಧ ಮಾರುಕಟ್ಟೆಗಳಿಗೆ ಹಾಗೂ ವಿದೇಶಗಳಿಗೂ ರಫ್ತಾಗುತ್ತಿವೆ. ಕಾರ್ಕಳದ ಹೆಸರನ್ನು ಹೊರಜಗತ್ತಿಗೆ ಪರಿಚಯಿಸುವ ಇಂತಹ ಸಂಸ್ಥೆಗಳ ಸಾಧನೆಯನ್ನು ರಾಜಕೀಯ ಕಾರಣಕ್ಕೆ ಅಪಹಾಸ್ಯ ಮಾಡಬಾರದು. ಕೃಷಿಕರಿಗಾಗಿ ಕಾರ್ಯನಿರ್ವಹಿಸುವ ಸಂಸ್ಥೆಯನ್ನು ಟೀಕಿಸುವುದರಿಂದ ಅದನ್ನು ಅವಲಂಬಿಸಿರುವ ರೈತರಿಗೂ ತೊಂದರೆಯಾಗಬಹುದು ಎಂದರು.

ರಪಕ್ಷ ಯಾವುದೇ ಇರಲಿ, ಊರಿನ ಅಭಿವೃದ್ಧಿಗೆ ಕೊಡುಗೆ ನೀಡುವವರನ್ನು ಗೌರವಿಸಬೇಕು. ಕಾರ್ಕಳ ಉತ್ಸವ, ಕಾರ್ಕಳ ಬ್ರ್ಯಾಂಡ್ ನಿರ್ಮಾಣದ ಮೂಲಕ ಕ್ಷೇತ್ರದ ಹೆಸರನ್ನು ಎತ್ತರಕ್ಕೇರಿಸುವ ಪ್ರಯತ್ನಗಳಿಗೆ ಬೆಂಬಲ ನೀಡಬೇಕು. ಕಾಂಗ್ರೆಸ್‌ನಲ್ಲಿಯೂ ಹಲವು ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಗುತ್ತಿಗೆದಾರರಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯದ ಕಾರಣಕ್ಕೆ ಉದ್ಯಮಿಗಳನ್ನು ವೈಯಕ್ತಿಕವಾಗಿ ಟೀಕಿಸುವುದರಿಂದ ಕಾರ್ಕಳದ ಉದ್ಯಮ ವಲಯದ ಮೇಲೆ ಪರಿಣಾಮ ಬೀರಬಹುದು. ಸಾರ್ವಜನಿಕವಾಗಿ ಮಾತನಾಡುವಾಗ ನಾಗರಿಕ ಸಂಭಾವನೆ ಕಾಪಾಡಿಕೊಳ್ಳಬೇಕು. ಪ್ರತಿಭಟನೆಗಳು ಜನರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವಂತಿರಬೇಕೇ ಹೊರತು ವೈಯಕ್ತಿಕ ನಿಂದನೆಗೆ ಸೀಮಿತವಾಗಬಾರದು ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕೃಷಿಕರಿಗೆ ಅಗತ್ಯ ನೀರಾವರಿ ಸೌಲಭ್ಯಗಳು, ರಸ್ತೆ ಅಭಿವೃದ್ಧಿಗೆ ನಿರೀಕ್ಷಿತ ಆದ್ಯತೆ ದೊರೆತಿಲ್ಲ. ಈ ಹಿಂದೆ ಕೃಷಿಕರಿಗೆ ನೀರಾವರಿ ಸೌಲಭ್ಯಗಳು ದೊರೆಯುತ್ತಿದ್ದವು ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳೂ ನಡೆಯುತ್ತಿದ್ದವು. ಆದರೆ, ನಂತರದ ವರ್ಷಗಳಲ್ಲಿ ಈ ಕ್ಷೇತ್ರಗಳಲ್ಲಿ ಪ್ರಗತಿ ಕುಂಠಿತವಾಗಿದೆ ಎಂದು ಮಣಿರಾಜ ಶೆಟ್ಟಿ ರಾಜ್ಯ ಸರಕಾರದ ಕಾರ್ಯವೈಖರಿ ಟೀಕಿಸಿದರು.

















































error: Content is protected !!
Scroll to Top