ಫ್ಲೈದುಬೈ‌ ವಿಮಾನದಲ್ಲಿದ್ದ 174 ಪ್ರಯಾಣಿಕರನ್ನು ರಕ್ಷಿಸಿದ ಧೀರ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್‌‌ನ ಅತ್ಯುನ್ನತ ನಾಗರಿಕ ಶೌರ್ಯ ಗೌರವ

ನವದೆಹಲಿ: ತನ್ನ ಪ್ರಾಣವನ್ನೂ ಲೆಕ್ಕಿಸದೆ ಟೆಲ್ ಅವೀವಾ‌ಗೆ ಹೋಗುತ್ತಿದ್ದ ಫ್ಲೈದುಬೈ ವಿಮಾನದಲ್ಲಿನ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಪೈಲಟ್ ಸ್ಮಿತ್ ಮಚ್ಚಾರ್ ಅವರಿಗೆ ಇಸ್ರೇಲಿನ ಅತ್ಯುನ್ನತ ನಾಗರಿಕ ಶೌರ್ಯ ಗೌರವಗಳಲ್ಲೊಂದು ಪ್ರಶಸ್ತಿಯನ್ನು ಪ್ರದಾನಿಸುವುದಾಗಿ ಇಸ್ರೇಲಿನ ಅಧ್ಯಕ್ಷ ಐಸಾಕ್ ಹೆರ್ಜಾಘ್ ಘೋಷಿಸಿದ್ದಾರೆ.

ಗಂಭೀರ ಗಾಯಗಳ ಕಾರಣಕ್ಕೆ ಸ್ಮಿತ್ ಅವರು ಅಬುದಾಬಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚೇತರಿಕೆಯ ಬಳಿಕ ಈ ಪ್ರಶಸ್ತಿ ಪ್ರದಾನ ಕಾರ್ಯ ನಡೆಯುತ್ತದೆ ಎಂದು ಹೆರ್ಜಾಘ್ ಹೇಳಿದ್ದಾರೆ.

ಘಟನೆ ವೇಳೆ ಪೈಲಟ್‌ಗೆ ನೆರವಾಗಿ ಸಂಭವನೀಯ ಭಾರೀ ವಿಮಾನ ದುರಂತವನ್ನು ತಪ್ಪಿಸಲು ಸಹಕರಿಸಿದ ಆರು ಇಸ್ರೇಲಿ ಪ್ರಯಾಣಿಕರಿಗೆ ಜೆರುಸಲೇಂನಲ್ಲಿ ನಡೆದ ಸಮಾರಂಭದಲ್ಲಿ ನಾಗರಿಕ ಶೌರ್ಯ ಪದಕ ಪ್ರದಾನ ಮಾಡಲಾಯಿತು. ತಲಿ ಮಾನೆಸ್, ಝಕಾ ಮಾನೆಸ್, ಯಾನಿವ್ ಹಯೂನ್, ವೈದ್ಯ ಶೋಟಾ ಮುಸಾಯೆವ್, ಅಸಫ್ ರಾಜುವಾನ್ ಮತ್ತು ಓರ್ ಪರ್ಡಿಲೋವ್ ಗೌರವಕ್ಕೆ ಪಾತ್ರರಾದರು.

ವಿಮಾನದಲ್ಲಿನ ತುರ್ತು ಪರಿಸ್ಥಿತಿಯನ್ನು ಗಮನಕ್ಕೆ ತಂದಿದ್ದರಿಂದ ಹಿಡಿದು, ಆರೋಪಿತ ದಾಳಿಕೋರನನ್ನು ನಿಯಂತ್ರಿಸಲು ನೆರವಾಗುವುದು ಮತ್ತು ಗಾಯಗೊಂಡ ಪೈಲಟ್‌ಗೆ ವೈದ್ಯಕೀಯ ನೆರವು ನೀಡುವವರೆಗೆ ಪ್ರಯಾಣಿಕರು ವಿವಿಧ ರೀತಿಯಲ್ಲಿ ಸಹಕರಿಸಿದ್ದರು.

















































error: Content is protected !!
Scroll to Top