ಕಣಂಜಾರು ಹೊಸಬೆಳಕು ಆಶ್ರಮದಲ್ಲಿ ವಿಶ್ವ ಸೇವಾ ಸಪ್ತಾಹ ಆಚರಣೆ

ಕಾರ್ಕಳ: ಕಣಂಜಾರು ಹೊಸಬೆಳಕು ಸೇವಾಶ್ರಮದಲ್ಲಿ ವಿಶ್ವ ಸೇವಾ ಸಪ್ತಾಹದ ಅಂಗವಾಗಿ ಅಗತ್ಯ ವಸ್ತುಗಳನ್ನು ಹಂಚುವ ಮೂಲಕ ಒಂದು ಜಿಲ್ಲೆ ಒಂದು ಸೇವಾ ಯೋಜನೆಯನ್ನು ಜಿಲ್ಲಾ ಗವರ್ನರ್‌ ಎಂಜೆಎಫ್‌ ಲಯನ್‌ ರಾಜೀವ್‌ ಕೋಟ್ಯಾನ್‌ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವಿಶ್ವ ಸೇವಾ ಸಪ್ತಾಹದ ಅಂಗವಾಗಿ ಲಯನ್ ಜಿಲ್ಲೆ 317Cಯ One District One Activity ಸೇವಾ ಯೋಜನೆಯನ್ನು ಅರ್ಥಪೂರ್ಣವಾಗಿ ಆಚರಿಸಿ, ಸೇವಾ ಮೈಲ್ಲುಗಲ್ಲನ್ನು ಸ್ಥಾಪಿಸುವ ಮೂಲಕ, 45 ಕ್ಲಬ್‌ಗಳು ಭಾಗವಹಿಸಿರುವುದು ಹರ್ಷ ತಂದಿದೆ. ಒಂದು ಜಿಲ್ಲೆ ಒಂದು ಸೇವಾ ಯೋಜನೆಯ ಅಡಿಯಲ್ಲಿ, ಈ ವರ್ಷದ ಮೊದಲ ಸೇವಾ ಕಾರ್ಯಕ್ರಮದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಲಯನ್ಸ್‌ ಮೂಲಕ ಸಹಾಯ ಹಸ್ತ ಚಾಚುವಲ್ಲಿ ದಾಖಲೆ ನಿರ್ಮಾಣ ಮಾಡಿದ್ದೇವೆ. 300ಕ್ಕೂ ಹೆಚ್ಚು ಅನಾಥ, ಮತ್ತು ನಿರಾಶ್ರಿತರ ಆಶ್ರಯ ತಾಣವಾಗಿರುವ ಹೊಸಬೆಳಕು ಆಶ್ರಮ, ಸಮಾಜದ ವಿವಿಧ ಸ್ತರದ ನೊಂದ ಬೆಂದ ಹೃದಯಿಗಳ ಸಾಂತ್ವನ ಕೇಂದ್ರವಾಗಿದೆ ಎಂದರು.

ಅಧ್ಯಕ್ಷತೆಯನ್ನು One District One Activity ಮುಖ್ಯ ಸಂಯೋಜಕರು ಲಯನ್ ಏಕನಾಥ್ ಬೋಳಾರ್, ಆಹಾರ್‌ ಕಿಟ್‌ ವಿತರಣೆಯನ್ನು ಉದ್ಘಾಟಿಸಿದ ಪ್ರಥಮ ಉಪಜಿಲ್ಲಾ ಗವರ್ನರ್‌ ಲಯನ್ ಹರಿಪ್ರಸಾದ್ ರೈ, ಜಾಗತಿಕ ಸೇವಾ ಸಪ್ತಾಹದ ಉದ್ಘಾಟನೆಯನ್ನ ದ್ವಿತೀಯ ಉಪಜಿಲ್ಲಾಗವರ್ನರ್ ಲಯನ್ ಇಂಜಿನಿಯರ್ ರಮಾನಂದ ಕೆ. ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ PDG & ಜಿಲ್ಲಾ ಸಲಹೆಗಾರರು ಲಯನ್ ಜಯಕರ ಶೆಟ್ಟಿ ಇಂದ್ರಳಿ, PDG & ಕಾರ್ಯಕ್ರಮ ಮಾರ್ಗದರ್ಶಕರು, ಲಯನ್ ಇಂಜಿನಿಯರ್ ಎನ್.ಎಂ. ಹೆಗ್ಡೆ ಜಿಲ್ಲಾ ಸಲಹೆಗಾರರು ಲಯನ್ ಬಿ. ಅರುಣ್ ಕುಮಾರ್ ಹೆಗ್ಡೆ, ಚೀಫ್‌ ಕೋಆರ್ಡಿನೇಟರ್‌ ಸರ್ವಿಸ್‌ ಲಯನ್ ದಿನಕರ ಶೆಟ್ಟಿ ಎಂ, ಚೀಫ್‌ ಕೋಆರ್ಡಿನೇಟರ್‌ ಕ್ಯಾಲೆಂಡರ್‌ ಆಫ್‌ ಇವೆಂಟ್ಸ್‌ ಲಯನ್ ರಜತ್ ಹೆಗ್ಡೆ, ಜಿಎಸ್‌ಟಿ ಕೋಆರ್ಡಿನೇಟರ್‌ ಲಯನ್ ಶಾಲಿನಿ ಬಂಗೇರ, ಹೊಸಬೆಳಕು ಆಶ್ರಮದ ಮೇಲ್ವಿಚಾರಕರು ತನುಲಾ ತರುಣ್‌, ಲಯನ್ ಉದಯ ಕುಮಾರ್ ಶೆಟ್ಟಿ ಹಾಲಾಡಿ, ಲಯನ್ ಗಣೇಶ್ ಸುವರ್ಣ, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಸದಾನಂದ ನಾವಡ, ಜಿಲ್ಲಾ ಸಂಪುಟ ಖಜಾಂಚಿ | ಲಯನ್ ವಿನೋದ ನಾರಾಯಣ್, ಮತ್ತು ಒಂದು ಜಿಲ್ಲೆ – ಒಂದು ಚಟುವಟಿಕೆ’ ಜಿಲ್ಲಾ ಆಹಾರ ಕಿಟ್ ತಂಡ : ಲಯನ್ ಜಿ.ಆರ್. ಪ್ರಕಾಶ್, ಲಯನ್ ಪ್ರಭಾಕರ್ ಹೆಚ್. ಕುಂದರ್, ಲಯನ್ ರಾಧಾಕೃಷ್ಣ ಮೆಂಡನ್, ಲಯನ್ ರವೀಂದ್ರನಾಥ ಹೆಗ್ಡೆ ಹಿರಿಯಡ್ಕ, ಲಯನ್ ವೈ. ಗೋಪಾಲ್ ಶೆಟ್ಟಿ ಮತ್ತು ಲಯನ್ ಶಂಕರ್ ಶೆಟ್ಟಿ. ಉಪಸ್ಥಿತರಿದ್ದರು.

















































error: Content is protected !!
Scroll to Top