ಕಾರ್ಕಳ: ನವರಾತ್ರಿಯ ಪ್ರಯುಕ್ತ ಕನ್ನಡಿ ಶ್ರೀ ಜಲದುರ್ಗಾ ದೇವಿ ದೇವಸ್ಥಾನ, ತೆಳ್ಳಾರು ಇಲ್ಲಿ ಅ. 11 ರಿಂದ ಅ. 20 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಧಾನ ಅಚಾರ್ಯ ವೇ। ಮೂ। ಬ್ರಹ್ಮಶ್ರೀ ಜಾರ್ಕಳ ಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿವೆ.
ಶರನ್ನವರಾತ್ರಿ ವಿಶೇಷ ಪೂಜೆ ಚಂಡಿಕಾಹೋಮ, ಕಲ್ಪೋಕ್ತಪೂಜೆ, ರಂಗಪೂಜೆ, ದುರ್ಗಾನಮಸ್ಕಾರ, ಅನ್ನಪ್ರಸಾದ ಸೇವೆಗಳು ನಡೆಯಲಿವೆ.
ಅ. 11 ರಿಂದ ಅ. 20 ರ ವರೆಗೆ ಪ್ರತಿನಿತ್ಯ ಮಹಾಪೂಜೆ ಕಲ್ಪೋಕ್ತ ಪೂಜೆ, ಮಹಾ ಪೂಜೆ, ರಂಗ ಪೂಜೆ, ಭಜನಾ ಸಂಕೀರ್ತನೆಗಳು ನಡೆಯಲಿವೆ. ಅ. 15 ರಂದು ಚಂಡಿಕಾ ಹೋಮ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿದ್ದು, ಅ. 11 ರಂದು ಚಿಣ್ಣರ ಚಿಲಿಪಿಲಿ ಮತ್ತು ಇತರ ಕಾರ್ಯಕ್ರಮಗಳು, ಅ. 12 ರಂದು ಬಡಗುತಿಟ್ಟು ಯಕ್ಷಗಾನ, ಅ. 13 ರಂದು ಡೆನ್ನಾನ ಕಲಾವಿದರು ಕಾರ್ಕಳ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅ. 14 ರಂದು ಭಕ್ತಿ ಸಂಗೀತ, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಅ. 15 ರಂದು ಯಕ್ಷ ವೈಭವ, ಅ. 16 ರಂದು ನಾಟಕ, ಅ.17 ರಂದು ತುಳು ಹಾಸ್ಯಮಯ ನಾಟಕ, ಅ.18 ರಂದು ತುಳು ಹಾಸ್ಯಮಯ ನಾಟಕ, ಅ.19 ರಂದು ನೃತ್ಯ ವೈವಿಧ್ಯ, ಅ.20 ರಂದು ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
























