ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಕರಿಚಿರತೆ

ಬೆಳ್ತಂಗಡಿ: ಅರಣ್ಯ ಇಲಾಖೆಯ ಸಿಬ್ಬಂದಿ ಇರಿಸಿದ್ದ ಬೋನಿನಲ್ಲಿ ಕರಿ ಚಿರತೆಯೊಂದು ಬಂಧಿಯಾದ ಘಟನೆ ಶಿರ್ಲಾಲಿನ ಮಣಿಲದಲ್ಲಿ ನಡೆದಿದೆ.

ವೇಣೂರು ವಲಯ ಅರಣ್ಯ ಇಲಾಖೆಯವರು ಮಣಿಲದ ಪದ್ಮನಾಭ ಎಂಬವರ ‌ಮನೆಯ ಸಮೀಪ ಬೋನು ಇರಿಸಿದ್ದರು. ಆ ಬೋನಿಗೆ ಇಂದು ಮುಂಜಾನೆ ಕರಿ ಚಿರತೆ ಬಿದ್ದಿದೆ. ಚಿರತೆಯ ಆರೋಗ್ಯ ಸ್ಥಿರವಾಗಿದೆ. ಪಶುವೈದ್ಯರು ತಪಾಸಣೆ ನಡೆಸಿದ ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಡಿನಿಂದ ಬಂದ ಅಪರೂಪದ ಅತಿಥಿಯನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.

















































error: Content is protected !!
Scroll to Top