ನವದೆಹಲಿ: ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳು 2027ರ ಫೆ. 16ರಂದು ಆರಂಭವಾಗಲಿವೆ ಎಂದು ಸಿಬಿಎಸ್‌ಇ ಪ್ರಕಟಣೆಯಲ್ಲಿ ತಿಳಿಸಿದೆ.
10ನೇ ತರಗತಿ ಪರೀಕ್ಷೆಗಳು 2027ರ ಮಾ. 9ರಂದು, 12ನೇ ತರಗತಿಯ ಪರೀಕ್ಷೆಗಳು ಎ. 9ರಂದು ಮುಕ್ತಾಯವಾಗಲಿವೆ ಎಂದು ಸಿಬಿಎಸ್‌ಇ ಹೇಳಿದೆ.
ಈ ಸಂಬಂಧ ಮಾಹಿತಿ ನೀಡಿರುವ ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಮ್ ಭಾರಧ್ವಾಜ್, 10ನೇ ತರಗತಿ ವಿದ್ಯಾರ್ಥಿಗಳಿಗೆ ಒಟ್ಟು 83 ವಿಷಯಗಳ ಪರೀಕ್ಷೆಯಿದ್ದು, 12ನೇ ತರಗತಿಗೆ ಒಟ್ಟು 121 ವಿಷಯಗಳಿವೆ. ಪರೀಕ್ಷೆ ಆರಂಭಕ್ಕೆ 101 ದಿನ ಮುಂಚಿತವಾಗಿ ವೇಳಾಪಟ್ಟಿ ನೀಡಲಾಗುತ್ತಿದೆ ಎಂದಿದ್ದಾರೆ.



























