KSRTC ಲಗೇಜು ದರ ಏರಿಕೆ: ಬಸ್ ಟಿಕೆಟ್ ಏರಿಕೆ ಬೆನ್ನಲ್ಲೇ ಪ್ರಯಾಣಿಕರಿಗೆ ಮತ್ತೊಂದು ಶಾಕ್

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಲಗೇಜ್ ಸಾಗಾಟ ಶುಲ್ಕ ಏರಿಸಿ ಪ್ರಯಾಣಿಕರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ.

ಕೆಎಸ್‌ಆರ್‌ಟಿಸಿಯ ನಾಲ್ಕು ಸಾರಿಗೆ ನಿಗಮಗಳು ಹಾಗೂ ನಗರ ಸಾರಿಗೆ ಬಸ್‌ಗಳ ಟಿಕೆಟ್ ದರ ಏರಿಕೆ ಮಾಡಿದ ಬೆನ್ನಲ್ಲೇ ಲಗೇಜ್ ಸಾಗಣೆ ದರವನ್ನೂ ಪರಿಷ್ಕರಿಸಲಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದ್ದು, ಪ್ರಯಾಣಿಕರು ಹೆಚ್ಚುವರಿ ಹಣ ಪಾವತಿಸಬೇಕಾಗಿದೆ.

ಪ್ರಯಾಣಿಕರಿಗೆ 10 ಕೆ.ಜಿ.ವರೆಗಿನ ಲಗೇಜ್ ಅನ್ನು ಉಚಿತವಾಗಿ ಸಾಗಿಸಲು ಅವಕಾಶವಿದೆ. ಇದರ ಜೊತೆಗೆ 20 ಕೆ.ಜಿ.ವರೆಗಿನ ಕೆಲವು ಭಾರವಾದ ಸಾಮಗ್ರಿಗಳ ಸಾಗಣೆಗೂ ಉಚಿತ ವಿನಾಯಿತಿ ನೀಡಲಾಗಿದೆ. ಆದರೆ ನಿಗದಿತ ಮಿತಿಗಿಂತ ಹೆಚ್ಚಿನ ತೂಕದ ಲಗೇಜ್ ಸಾಗಣೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಕೆ ಎಸ್ ಆರ್ ಟಿ ಸಿ ಟಿಕೆಟ್ ದರದ ಜೊತೆ ಲಗೇಜ್ ದರ ಏರಿಕೆ ಪ್ರಯಾಣಿಕರಿಗೆ ಆರ್ಥಿಕ ಹೊರೆ ಏರಿಸಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ























































































































error: Content is protected !!
Scroll to Top