ಮಣಿಪಾಲ ಜ್ಞಾನಸುಧಾ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಣಿಪಾಲ : ಕಠಿಣ ಪರಿಶ್ರಮಕ್ಕೆ, ಸಮರ್ಪಣಾ ಮನೋಭಾವನೆಗೆ ಡಾ. ಸುಧಾಕರ್ ಶೆಟ್ಟಿ ಅವರೇ ನಮಗೆ ರೋಲ್ ಮಾಡೆಲ್ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟಿ ಅನಿಲ್ ಕುಮಾರ್ ಜೈನ್ ಹೇಳಿದರು.
ಅವರು ಎ. 17ರಂದು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮೊದಲ ಬ್ಯಾಚಿನ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು. ಹೆತ್ತವರ ಪಾದ ಮುಟ್ಟಿ ನಮಸ್ಕರಿಸುವ ಅಭ್ಯಾಸ ಬೆಳೆಸಿಕೊಂಡರೆ ಅದೇ ನಮ್ಮ ಸಾಧನೆಯ ಸ್ಫೂರ್ತಿಯಾಗಿ ಬದಲಾಗುತ್ತದೆ ಎಂದು ಅವರು ಹೇಳಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು. ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 98ಕ್ಕಿಂತ ಅಧಿಕ ಅಂಕ ಪಡೆದ ಮಣಿಪಾಲ ಜ್ಞಾನಸುಧಾ ವಿದ್ಯಾರ್ಥಿಗಳಾದ ಅಶ್ವಿನ್ ವಿ. ಶೆಟ್ಟಿ (596), ಪಿ. ಅಖಿಲ್ ಶರ್ಮ (594), ಶ್ರೀರಾಮ್ ಕೆ. ಹೆಬ್ಬಾರ್ (594), ಪರ್ಣಿಕಾ (593), ರಕ್ಷಿತ್ ಶೆಟ್ಟಿ (592) ಈಶ್ವರಿ ಬಿ. ಶೇಟ್ (591), ಸಾಜನ್ ಆರ್. (591), ಪ್ರಥ್ವೀಧರ ಎಲ್. ಕಾರಂತ್ (590), ತ್ರಿಶಾ ಶೆಟ್ಟಿ ಬಿ. (589), ಚೈತನ್ಯ ಎಸ್. ನಾಯ್ಕ (588), ದೃಶ್ಯ ಜೆ. ಶೆಟ್ಟಿ (588), ಕಾರುಣ್ಯ ಸೋಮಯಾಜಿ (588), ಶ್ರೀರಕ್ಷಾ ಹೆಗ್ಡೆ (588) ಅವರನ್ನು ಸನ್ಮಾನಿಸಲಾಯಿತು. ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ಶೆಟ್ಟಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು., ಉಪ ಪ್ರಾಂಶುಪಾಲ ಹೇಮಂತ್ ಹಾಗೂ ರವಿ ಜಿ. ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.











































































error: Content is protected !!
Scroll to Top