30 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ
ಕಾರ್ಕಳ : ಎಸ್ಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜ್ಞಾನಸುಧಾದ ವಿದ್ಯಾರ್ಥಿಗಳು ಅಮೋಘ ಸಾಧನೆ ಮೆರೆದಿದ್ದು, ಮಹಾಲಕ್ಷ್ಮೀ ಭಾಗವ್ ಹಾಗೂ ಮಹಾಲಕ್ಷ್ಮೀ ಪೈ ಬಿ. ತಲಾ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಗಳಾಗಿ ಹೊರಹೊಮ್ಮಿದ್ದಾರೆ. ವೈಷ್ಣವಿ ಶೆಟ್ಟಿಗಾರ್ 623 ಹಾಗೂ ಆರುಷಿ ಪೂಜಾರಿ 622 ಅಂಕ ಪಡೆದಿದ್ದಾರೆ. ಶೇ. 100 ಫಲಿತಾಂಶದೊಂದಿಗೆ ಜ್ಞಾನಸುಧಾದ 30 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ ಪಡೆದು ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ.







































