ಕಾರ್ಕಳ : ಕುಕ್ಕುಂದೂರು ಬಂಗ್ಲೆಗುಡ್ಡೆ ಸದ್ಭಾವನ ನಗರ ಶ್ರೀ ವಿದ್ಯಾಸರಸ್ವತೀ ಭಜನಾ ಮಂದಿರದಲ್ಲಿ 17ನೇ ವರ್ಷದ ನವರಾತ್ರಿ ಉತ್ಸವ ಹಾಗೂ 8ನೇ ವರ್ಷದ ಶಾರದೋತ್ಸವ ಅತ್ಯಂತ ವಿಜ್ರಂಭಣೆಯಿಂದ ಜರುಗುತ್ತಿದೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಅ. 11ರಿಂದ ನವರಾತ್ರಿ ಉತ್ಸವಕ್ಕೆ ನಡೆಯುತ್ತಿದ್ದು, ಅ. 21ರಂದು ಸಂಪನ್ನಗೊಳ್ಳಲಿದೆ.
ಅ. 20ರಂದು ಗಣಹೋಮ, ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ರಾತ್ರಿ ಗಂಟೆ ರಿಂದ ಐಸಿರ ಡ್ಯಾನ್ಸ್ ಅಕಾಡಮಿ ವತಿಯಿಂದ ಶ್ರೀ ಕೊಲ್ಲೂರು ಮೂಕಾಂಬಿಕೆ ನೃತ್ಯ ರೂಪಕ ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ.
ಅ. 21ರ ಸಂಜೆ ಗಂಟೆ 5ರಿಂದ ಬಂಡಿಮಠ ಸಾಗಿ ಜೋಗಿನಕೆರೆಗೆ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆಯಲಿದೆ. ಭಜನಾ ತಂಡಗಳು, ವಿವಿಧ ಸ್ತಬ್ದಚಿತ್ರಗಳು ಮೆರವಣಿಗೆಗೆ ಮೆರುಗು ನೀಡಲಿದೆ.
ಸದ್ಭಾವನ ನಗರ – 8ನೇ ವರ್ಷದ ದಸರಾ ವೈಭವ







































