‘ನೋವು ಕೊಟ್ಟು ಹೋಗ್ತಾ ಇದೀನಿ, ಕ್ಷಮಿಸಮ್ಮಾ’ ಎಂದು ಡೆತ್‌ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

ಹಾಸನ: ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಕೊರಳೊಡ್ಡಿದ ಘಟನೆ ರವೀಂದ್ರನಗರದಲ್ಲಿರುವ ಒಕ್ಕಲಿಗರ ಸಂಘದ ಮಹಿಳಾ ಹಾಸ್ಟೆಲ್‌ನಲ್ಲಿ ನಡೆದಿದೆ.

ದ್ವಿತೀಯ ಬಿ.ಕಾಂ. ಓದುತ್ತಿದ್ದ ಅರಕಲಗೂಡಿನ ಹೊಡೆನೂಡು ಗ್ರಾಮದ ಲಕ್ಷ್ಮೀ(20) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಡೆತ್‌ನೋಟ್‌ನಲ್ಲಿ ‘ಸಾರಿ ಅಮ್ಮ ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳ್ಳಿಸಿಕೊಳ್ಳಲು ಆಗಲಿಲ್ಲ. ಯಾರಿಗೂ ಯಾವತ್ತು ಮೋಸ ಮಾಡಲಿಲ್ಲ. ಯಾರಿಗೂ ಕಣ್ಣಲ್ಲೂ ನೀರು ಹಾಕ್ಸಿಲ್ಲ. ಯಾರ ಹತ್ರನೂ ಕಿತ್ಕಂಡು ತಿಂದಿಲ್ಲ ಅಮ್ಮ. ಆದರೂ ಜೀವನ ತುಂಬಾ ಅನ್ಯಾಯ ಮಾಡಬಿಡ್ತು ಅಮ್ಮ. ಮೆಂಟಲಿ ವೀಕ್ ಆಗ್ಬಿಟ್ಟೆ. ಎಷ್ಟು ಟ್ರೈ ಮಾಡಿದ್ರೂ ಬದುಕೊಕೆ ಆಗಲಿಲ್ಲ. ನನ್ನ ಸ್ವಾರ್ಥಕ್ಕೆ ಜೀವನ ಪೂರ್ತಿ ನಿನಗೆ ನೋವು ಕೊಟ್ಟು ಹೋಗ್ತಿದ್ದೀನಿ. ಸಾರಿ ಅಪ್ಪಾಜಿ, ನನ್ನ ಮೇಲೆ ಕೋಪ ಮಾಡ್ಕೊಬೇಡಿ. ನನಗೆ ಬೇರೆ ದಾರಿ ತಿಳಿಯಲಿಲ್ಲ. ತಮ್ಮ, ನಿನ್ನ ಅಕ್ಕ ಕೆಟ್ಟವಳಲ್ಲಾ ಕಣೋ. ಅಪ್ಪ-ಅಮ್ಮನ ಚೆನ್ನಾಗಿ ನೋಡ್ಕೋ, ನಾನು ಹೋಗ್ತಿದ್ದೀನಿ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನು ಬ್ಲೇಮ್ ಮಾಡೋದು ಬೇಡ ಗುಡ್ ಬೈ’ ಎಂದು ಬರೆದಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.















































































error: Content is protected !!
Scroll to Top