ವಿಶ್ವ ತುಳುವ ಮಹಾಸಭಾ ಹೆಬ್ರಿ ವಲಯ ಸಮಿತಿ ರಚನೆ

ಹೆಬ್ರಿ: ಹೆಬ್ರಿಯ ಭಾಸ್ಕರ್ ಜೋಯಿಸ್ ಅವರ ಸಹಕಾರದೊಂದಿಗೆ ಶ್ರೀ ಅನಂತಪದ್ಮನಾಭ ಸನ್ನಿಧಿಯಲ್ಲಿ ವಿಶ್ವ ತುಳುವ ಮಹಾಸಭೆಯ ಅಂತರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹೆಬ್ರಿ ವಲಯ ಸಮಿತಿ ರಚನೆ ಮಾಡಲಾಯಿತು.

ಅಧ್ಯಕ್ಷರಾಗಿ ಹೆಬ್ರಿ ನವೀನ್ ಅಡ್ಯಂತಾಯ ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ. ಗೌರವಾಧ್ಯಕ್ಷರಾಗಿ ಹೆಬ್ರಿ ಭಾಸ್ಕರ್ ಜೋಯಿಸ್, ನೀರೆ ಕೃಷ್ಣ ಶೆಟ್ಟಿ, ಸೀತಾನದಿ ವಿಠ್ಠಲ್ ಶೆಟ್ಟಿ ಆಯ್ಕೆಯಾದರು.

ಸಂಚಾಲಕರಾಗಿ ಬೆಳಿಂಜೆ ಹರೀಶ್ ಪೂಜಾರಿ, ಉಪಾಧ್ಯಕ್ಷ ರಮೇಶ್ ಪೂಜಾರಿ ಶಿವಪುರ, ನಾಗೇಶ್ ನಾಯಕ್ ಸೀತಾನದಿ, ಕೃಷ್ಣಯ್ಯ ಶೆಟ್ಟಿ ವಕೀಲರು, ಹರೀಶ್ ಶೆಟ್ಟಿ ಹೆಬ್ರಿ, ಪ್ರಸನ್ನ ಕುಮಾರ್ ಶೆಟ್ಟಿ ಚಾರ , ಶಂಕರ್ ಶೇರಿಗಾರ್, ಜನಾರ್ದನ್ ಹೆಬ್ರಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಶಿಕ್ಷಕ ಮಂಜುನಾಥ ಕುಲಾಲ್, ಜೊತೆ ಕಾರ್ಯದಶಿಯಾಗಿ ಸುಕುಮಾರ್ ಮುನಿಯಾಲು, ಕೋಶಾಧಿಕಾರಿಯಾಗಿ ಹೆಬ್ರಿ ನರೇಂದ್ರ ನಾಯಕ್, ತುಳುವೇಶ್ವರ ಮತ್ತು ತುಳುವೇಶ್ವರಿ ದೇವಸ್ಥಾನದ ಸಂಚಾಲಕ ಸೀತಾರಾಮ ಹೆಬ್ಬಾರ್ ಕಬ್ಬಿನಾಲೆ ಆಯ್ಕೆ.

ಗೌರವ ಸಲಹೆಗಾರರಾಗಿ ವಿದ್ಯಾಧರ್ ಹೆಗ್ಡೆ (ಪ್ರಾಂಶುಪಾಲರು ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ), ಹರಿದಾಸ್ ಹೆಗ್ಡೆ (ನಿವೃತ್ತ ಶಿಕ್ಷಕರು ಹೆಬ್ರಿ), ಯಂ. ತಿಮ್ಮಪ್ಪ ಶೆಟ್ಟಿಗಾರ್ (ನಿವೃತ್ತ ಕಂದಾಯ ಅಧಿಕಾರಿ), ಸುಂದರ ಹೆಗ್ಡೆ ಸುಮನಸ ಹೆಬ್ರಿ, ಬಾಲಚಂದ್ರ ಮುದ್ರಾಡಿ, ಲಕ್ಷ್ಮಣ್ ಆಚಾರ್ಯ ವರಂಗ ಆಯ್ಕೆ.

ಎಲ್ಲಾ ಪದಾಧಿಕಾರಿಗಳನ್ನು ವಿಶ್ವ ತುಳುವ ಮಹಾಸಭೆಯ ಅಂತರಾಷ್ಟ್ರೀಯ ಅಧ್ಯಕ್ಷರು ಸರ್ವೋತ್ತಮ ಶೆಟ್ಟಿ, ವಿಶ್ವ ತುಳುವ ಮಹಾಸಭೆಯ ಅಂತರಾಷ್ಟ್ರೀಯ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ್ ರೈ ಅಂತರಾಷ್ಟ್ರೀಯ ಫೌಂಡೇಶನ್ ಸಂಚಾಲಕ ಡಾ.ಮರಾಜೇಶ್ ಆಳ್ವ, ವಿಶ್ವ ತುಳುವ ಮಹಾಸಭಾ ಜಿಲ್ಲಾ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ, ಸಂಚಾಲಕ ವಿಶ್ವನಾಥ್ ಆಚಾರ್ಯ ಇವರ ಉಪಸ್ಥಿತಿಯಲ್ಲಿ ಮತ್ತು ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಇವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ವಲಯ ಸಮಿತಿ ರಚನೆಯಾಗಿದೆ.

ಆಯ್ಕೆ ಪ್ರಕ್ರಿಯೆಗೆ ಜಿಲ್ಲಾ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ ಮತ್ತು ಹೆಬ್ರಿ ಲಯನ್ಸ್ ಕ್ಲಬ್ಬಿನ ಹಿರಿಯ ಸದಸ್ಯರು, ಹೆಬ್ರಿಯ ಸರ್ವತೋಮುಖ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜ ಚಿಂತಕ ಲಯನ್ ಟಿ. ಜಿ .ಆಚಾರ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಶೆಟ್ಟಿ ಸಾಯಿರಾಂ ಅವರು ಎಲ್ಲರನ್ನು ಜೊತೆ ಸೇರಿಸುವಲ್ಲಿ ಸಹಕರಿಸಿದರು.

ಟಿ.ಜಿ. ಆಚಾರ್ಯ ಅವರನ್ನು ವಿಶ್ವ ತುಳುವ ಮಹಾಸಭೆಯ ಜಿಲ್ಲಾ ಕಾರ್ಯದರ್ಶಿಯಾಗಿ ಅಂತರಾಷ್ಟ್ರೀಯ ಅಧ್ಯಕ್ಷರು ಸರ್ವೋತ್ತಮ ಶೆಟ್ಟಿ ಅವರು ಘೋಷಣೆ ಮಾಡಿದರು.

.















































































error: Content is protected !!
Scroll to Top