ಉಗ್ರರ ಜೊತೆ ನಂಟು ಹೊಂದಿದ್ದ ಮುಮ್ತಾಜ್ ಉಲ್ ಮಲಿಕ್ ಬಂಧನ

ಕಲ್ಬುರ್ಗಿ: ಉಗ್ರಗಾಮಿಗಳ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆ ಪಶ್ಚಿಮ ಬಂಗಾಳ ಮೂಲದ ಮುಮ್ತಾಜ್ ಉಲ್ ಮಲಿಕ್‌ನನ್ನು ಬಂಧಿಸಲಾಗಿದೆ.

ಕೇಂದ್ರ ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಶರಫಗ ಬಜಾರದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಕೆಲ ದಿನಗಳ ಹಿಂದೆ, ಕಲ್ಬುರ್ಗಿಯಲ್ಲಿ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ (23) ಎಂಬಾತನನ್ನು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಆದರ ಬೆನ್ನಲ್ಲೇ ಈಗ ಮತ್ತೊಬ್ಬ ಯುವಕನನ್ನು ಬಂಧಿಸಲಾಗಿದೆ. ಸಮೀರ್‌ನ ಮೊಬೈಲ್ ಪರಿಶೀಲನೆ ವೇಳೆ ಭಯೋತ್ಪಾದಕರಿಗೆ ಸಂಬಂಧಿಸಿದ ಚಿತ್ರಗಳು ಮತ್ತು ವಿಡಿಯೊಗಳು ಪತ್ತೆಯಾಗಿವೆ ಎನ್ನಲಾಗಿದೆ.

ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ನಾವು ಭಾರತ ಸರ್ಕಾರದೊಂದಿಗೆ ಕೋ-ಆರ್ಡಿನೇಷನ್ ನೊಂದಿಗೆ ತನಿಖೆ ನಡೆಸುತ್ತಿದ್ದೇವೆ. ಹೊರ ರಾಜ್ಯದವರು ಬಹಳಷ್ಟು ಜನ ಇಲ್ಲಿಗೆ ಉದ್ಯೋಗಕ್ಕೆ ಆಗಮಿಸುತ್ತಿದ್ದಾರೆ. ಅದು ಅವರ ಹಕ್ಕು ತಡೆಯಲು ಆಗಲ್ಲ. ಆದರೆ ಇಲ್ಲಿ ಕೆಲಸ ಮಾಡುವ ಬೇರೆ ರಾಜ್ಯದವರ ಬಗ್ಗೆ ಮಾಹಿತಿ ಕೊಡುವೆಂದು ಹೇಳಿದ್ದೇವೆ ಯಾರು ಕೊಟ್ಟಿಲ್ಲ. ಹಬ್ಬದ ನಂತರ ಎಲ್ಲಾ ಉದ್ಯಮಿಗಳು, ಇ ಕಾಮರ್ಸ್, ಕಾಫಿ ಅಸೋಸಿಯೇಷನ್‌, ಹೋಂ ಸ್ಟೇ ಸೇರಿ ಎಲ್ಲರನ್ನ ಕರೆಸಿ ನಿಮ್ಮ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸೆಸ್ ಏನು ಎನ್ನುವ ಮಾಹಿತಿ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.















































































error: Content is protected !!
Scroll to Top