ಕಾರ್ಕಳ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಾರ್ಕಳ ಇಲ್ಲಿನ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಪವಿತ್ರಾ ಎಸ್. ಇವರು ಡಾ. ನವೀನ್ ಕುಮಾರ್ ಜೆ.ಆರ್. ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕ್ಲಾಸಿಪಿಕೇಷನ್ ಆಪ್ ಥೈರಾಡ್ ಕ್ಯಾನ್ಸರ್ ಯೂಸಿಂಗ್ ಡೀಪ್ ಲರ್ನಿಂಗ್ ಟೆಕ್ನಿಕ್” ಎಂಬ ಸಂಶೋದನ ಮಹಾಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾನಿಲಯ ಮಂಗಳೂರು ಪಿಎಚ್‌ಡಿ ಪದವಿ ನೀಡಿದೆ.
ಇವರು ಕಾರ್ಕಳ ಕೌಡೂರು ಕೃಷ್ಣಪ್ರಸಾದ್ ಭಟ್ ಇವರ ಪತ್ನಿ. ಉಡುಪಿ ಇನ್ನಂಜೆಯ ನಿವೃತ್ತ ಶಿಕ್ಷಕ ದಂಪತಿ ಸುಬ್ರಹ್ಮಣ್ಯ ಶ್ಯಾನುಭೋಗ್ – ಭಾರತಿ ಅವರ ಪುತ್ರಿ, ಕಾರ್ಕಳ ಕೌಡೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ ಭಟ್ – ಸುಮಂಗಲಾ ವಿ. ಭಟ್ ಅವರ ಸೊಸೆ.








































