ನೇಣು ಬಿಗಿದು ಆತ್ಮಹತ್ಯೆ

ಶಿವಮೊಗ್ಗ: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿಕಾರಿಪುರ ಪಟ್ಟಣದ ಚೆನ್ನಕೇಶವ ನಗರದಲ್ಲಿ ನಡೆದಿದೆ.

ಅನ್ವಿತ್ ಸಾಗರ್ (27) ಎಂಬಾತನೇ ಮೃತ ವ್ಯಕ್ತಿ. ಇವರು ಎಂಜಿನಿಯರ್ ಆಗಿದ್ದರು. ಪಟ್ಟಣದ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಲ್. ಗಣಪತಿ ಅವರ ಪುತ್ರ. ಶನಿವಾರ ಪೋಷಕರ ಜೊತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ವಾಪಸ್ ಆಗಿದ್ದ ಅನ್ವಿತ್ ಭಾನುವಾರ ಮಧ್ಯಾಹ್ನ ಏಕಾಏಕಿ ಪಟ್ಟಣದ ಚನ್ನಕೇಶವ ನಗರದಲ್ಲಿರುವ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಅನ್ವಿತ್ ತಂದೆ-ತಾಯಿ, ಸಹೋದರನ ಸಹಿತ ಬಂಧು ಬಳಗ ಆಗಲಿದ್ದಾರೊ. ಸಂಜೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ರಾತ್ರಿ ಪಟ್ಟಣದ ಹೊನ್ನಾಳಿ ರಸ್ತೆಯ ವೀರಶೈವ ಹಿಂದು ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.





























































































































error: Content is protected !!
Scroll to Top