ಕಾರ್ಕಳ : ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ–ದಾರಗ ದೇವಸ್ಥಾನ ಹಾಗೂ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಕಾರ್ಯಕ್ಕೆ ವಿಜಯದಶಮಿಯಂದು ಚಾಲನೆ ನೀಡಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ವ್ಯವಸ್ಥಾಪಕ ಸಮಿತಿಯ ಶುಭದರ್ ಶೆಟ್ಟಿ, ರವಿ ಪೂಜಾರಿ, ಜಯಕರ ಶೆಟ್ಟಿ, ದೇವಸ್ಥಾನ ಹಾಗೂ ಗರಡಿಯ ಅರ್ಚಕರು, ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.








































