ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಕಾರ್ಕಳ – 399 : ಹೆಬ್ರಿ – 122 ಸದಸ್ಯರ ಸಂಖ್ಯೆ ನಿಗದಿ

ಉಡುಪಿ : ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಉಡುಪಿ ಜಿಲ್ಲೆಯ ಏಳು ತಾಲೂಕುಗಳಿಂದ ಆಯ್ಕೆಯಾಗುವ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರ ಸಂಖ್ಯೆಯನ್ನು‌ ನಿಗದಿಪಡಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ರಡಿ ಹಾಗೂ 308 (ಇ) (ಎಫ್) ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.

ಕಾರ್ಕಳ
ಕಡ್ತಲ-14, ಮರ್ಣೆ-24, ಹಿರ್ಗಾನ-13, ಶಿರ್ಲಾಲು-8, ಕೆರ್ವಾಶೆ-8, ಮಾಳಾ-15, ಮುಡಾರು-16, ದುರ್ಗಾ-9, ಕುಕ್ಕುಂದೂರು-33, ಎರ್ಲಪಾಡಿ-12, ಬೈಲೂರು-14, ನೀರೆ-15, ಪಳ್ಳಿ-15, ಕಲ್ಯಾ -10, ನಿಟ್ಟೆ31, ಸಾಣೂರು-18, ಮಿಯಾರು-19, ನಲ್ಲೂರು-15, ಈದು-19, ರೆಂಜಾಳ-8, ಇರ್ವತ್ತೂರು-7, ಬೋಳಾ-10, ಕಾಂತಾವರ-9, ಬೆಳ್ಮಣ್-18, ನಂದಳಿಕೆ-12, ಇನ್ನಾ -9 ಹಾಗೂ ಮುಂಡ್ಕೂರು 18 ಸೇರಿದಂತೆ ಒಟ್ಟು 399 ಸದಸ್ಯ ಸ್ಥಾನಗಳು.

ಹೆಬ್ರಿ
ಕುಚ್ಚೂರು-11, ನಾಡ್ಪಾಲು-7, ಹೆಬ್ರಿ-16, ಚಾರಾ ಮತ್ತು ಶಿವಪುರ ತಲಾ-13, ಮುದ್ರಾಡಿ-15, ವರಂಗ ಹಾಗೂ ಬೆಳ್ವೆ ತಲಾ-18 ಮತ್ತು ಮಡಾಮಕ್ಕಿ-11 ಸೇರಿದಂತೆ ಒಟ್ಟು 122 ಸದಸ್ಯರು.

ಕುಂದಾಪುರ
ಆಲೂರು ಮತ್ತು ಕೆರಾಡಿ ತಲಾ-14, ಚಿತ್ತೂರು-8, ವಂಡ್ಸೆ-7, ಹಕ್ಲಾಡಿ-16, ತ್ರಾಸಿ-8, ಗುಜ್ಜಾಡಿ-16, ಹೆಮ್ಮಾಡಿ-11, ತಲ್ಲೂರು-16, ಹಟ್ಟಿಯಂಗಡಿ-14, ಕರ್ಕುಂಜೆ-11, ಆಜ್ರಿ-19, ಹೊಸಂಗಡಿ-13, ಸಿದ್ಧಾಪುರ-19, ಶಂಕರನಾರಾಯಣ -18, ಅಂಪಾರು-13, ಕಾವ್ರಾಡಿ-16, ಬಳ್ಕೂರು-8, ಬಸ್ರೂರು-17, ಆನಗಳ್ಳಿ-8, ಹಂಗಳೂರು-12, ಕೋಣಿ-10, ಕೋಟೇಶ್ವರ-26, ಬೀಜಾಡಿ-16, ಕುಂಭಾಶಿ ಹಾಗೂ ತೆಕ್ಕಟ್ಟೆ ತಲಾ-14, ಬೇಳೂರು-9, ಕೆದೂರು-10, ಕಾಳಾವರ ಹಾಗೂ ಹೊಂಬಾಡಿ ಮಂಡಾಡಿ ತಲಾ-17, ಮೊಳಹಳ್ಳಿ-11, ಹಾರ್ದಳ್ಳಿ ಮಂಡಳ್ಳಿ-13, ಹಾಲಾಡಿ-11, ಹೆಂಗವಳ್ಳಿ-9, ಅಮಾಸೆಬೈಲು-19, ಇಡೂರು ಕುಂಜ್ಞಾಡಿ-12, ಹೊಸಾಡು-15, ಕಟ್ ಬೆಲ್ತೂರು ಹಾಗೂ ಗುಲ್ವಾಡಿ ತಲಾ 13, ಯಡಮೊಗೆ -6, 74 ಉಳ್ಳೂರು, ಕಂದಾವರ, ಗೋಪಾಡಿ ಹಾಗೂ ಕೊರ್ಗಿ ತಲಾ 9 ಮತತು ಗಂಗೊಳ್ಳಿ-33 ಸೇರಿದಂತೆ ಒಟ್ಟು 602 ಸದಸ್ಯರು.

ಬೈಂದೂರು
ಬಿಜೂರು-18, ಗೋಳಿಹೊಳೆ-16, ಹಳ್ಳಿಹೊಳೆ-6, ಕೆರ್ಗಾಲು-12, ಹೇರೂರು-13, ಜಡ್ಕಲ್ -18, ಕಾಲ್ತೋಡು -13, ಕಂಬದಕೋಣೆ – 14, ಕಿರಿಮಂಜೇಶ್ವರ-19, ಕೊಲ್ಲೂರು-9, ಮರವಂತೆ-14, ನಾಡಾ-19, ನಾವುಂದ -15, ಶಿರೂರು-44 ಮತ್ತು ಉಪ್ಪುಂದ -29 ಸೇರಿದಂತೆ ಒಟ್ಟು 259 ಸದಸ್ಯರು.

ಉಡುಪಿ
ಪೆರ್ಡೂರು-28, ಕುಕ್ಕೆಹಳ್ಳಿ-14, ಬೈರಂಪಳ್ಳಿ-16, ಕಲ್ಯಾಣಪುರ-20, ತೋನ್ಸೆ-21, ತೆಂಕನಿಡಿಯೂರು-26, ಬಡಾನಿಡಿಯೂರು-11, ಅಂಬಲಪಾಡಿ-19, ಕಡೇಕಾರು-21, ಉದ್ಯಾವರ-30, 80 ಬಡಗಬೆಟ್ಟು-24, ಆತ್ರಾಡಿ-14, ಕೊಡಿಬೆಟ್ಟು-19, ಬೊಮ್ಮರಬೆಟ್ಟು-21, ಮಣಿಪುರ-16 ಮತ್ತು ಅಲೆವೂರು-29 ಸೇರಿದಂತೆ ಒಟ್ಟು329 ಸದಸ್ಯರು.

ಬ್ರಹ್ಮಾವರ
ಕೋಟತಟ್ಟು-13, ಕೋಟ-25, ಪಾಂಡೇಶ್ವರ-13, ಕೋಡಿ-12, ಐರೋಡಿ-16, ಬಾರ್ಕೂರು-12, ವಡ್ಡರ್ಸೆ-17, ಯಡ್ತಾಡಿ-16, ಶಿರಿಯಾರ-13, ಬಿಲ್ಲಾಡಿ-12, ಆವರ್ಸೆ-16, ಹೆಗ್ಗುಂಜೆ-15, ಹನೇಹಳ್ಳಿ-11, ಕಾಡೂರು-12, ನಾಲ್ಕೂರು-17, ಕೊಕ್ಕರ್ಣೆ-21, ಚೇರ್ಕಾಡಿ-16, 38 ಕಳತ್ತೂರು-13, ಕರ್ಜೆ-12, ಆರೂರು-10, ಉಪ್ಪೂರು-20, ವಾರಂಬಳ್ಳಿ-18, ಹಾರಾಡಿ-19, ಚಾಂತಾರು-26, ಹಾವಂಜೆ -10, ಹಂದಾಡಿ-18 ಮತ್ತು ನೀಲಾವರ -9 ಸೇರಿದಂತೆ ಒಟ್ಟು 412 ಸದಸ್ಯರು.

ಕಾಪು
ಬೆಳ್ಳೆ-18, ಕುರ್ಕಾಲು-14, ಶಿರ್ವ-34, ಇನ್ನಂಜೆ-13, ಕಟಪಾಡಿ-26, ಕೋಟೆ-15, ಮಜೂರು-13, ಕುತ್ಯಾರು-14, ಮುದರಂಗಡಿ-15, ಬೆಳಪು-11, ಬಡಾ-21, ಎಲ್ಲೂರು-14, ಫಲಿಮಾರು-16, ತೆಂಕ-11, ಪಡುಬಿದ್ರಿ-34 ಹಾಗೂ ಹೆಜಮಾಡಿ -21 ಸೇರಿದಂತೆ ಒಟ್ಟು 290 ಸದಸ್ಯರು.

ಈ ಮೇಲ್ಕಂಡ ಚುನಾಯಿತ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಏ. 24 ರ ಸಂಜೆ 5 ಗಂಟೆಯ ಒಳಗಾಗಿ ಆನ್‌ಲೈನ್ ಮೂಲಕ ವೆಬ್‌ಸೈಟ್ https://rdpr.karnataka.gov.in/rdc/public/ ಅಥವಾ ಅಂಚೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ‌ : 222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.













































































error: Content is protected !!
Scroll to Top