ಬಜಗೋಳಿಯಲ್ಲಿ ನಾಳೆ ಅಗ್ನಿಲ ಕೆಫೆ ಲೋಕಾರ್ಪಣೆ

ಕಾರ್ಕಳ : ಬಜಗೋಳಿಯ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಹೊಸ ರುಚಿಯ ಅನುಭವ ನೀಡಲು ಸಜ್ಜಾಗಿರುವ ʼಅಗ್ನಿಲ ಕೆಫೆʼಯು ನಾಳೆ (ಎ. 23) ಶುಭಾರಂಭಗೊಳ್ಳಲಿದೆ. ಬಜಗೋಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಆವರಣದಲ್ಲಿರುವ ಅಗ್ನಿಲ ಸರ್ವಿಸ್ ಸ್ಟೇಷನ್‌ ಬಳಿ ಈ ನೂತನ ಕೆಫೆ ತಲೆಯೆತ್ತಿದೆ.
​ಆಧುನಿಕ ಶೈಲಿಯ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿರುವ ಕೆಫೆಯಲ್ಲಿ ಆಹಾರ ಪ್ರಿಯರಿಗಾಗಿ ವೈವಿಧ್ಯಮಯ ತಿಂಡಿ-ತಿನಿಸುಗಳು ಲಭ್ಯವಿರಲಿವೆ. ಐಸ್‌ಕ್ರೀಂ, ವಿವಿಧ ಮಾದರಿಯ ಮಿಲ್ಕ್ ಶೇಕ್‌ಗಳು, ಪಿಜ್ಜಾ ಹಾಗೂ ಬಿಸಿಬಿಸಿಯಾದ ಕಾಫಿ ಮತ್ತು ಟೀ ಲಭ್ಯವಿದ್ದು, ಗುಣಮಟ್ಟದ ಸೇವೆಯನ್ನು ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ​ಹೆದ್ದಾರಿ ಬದಿಯಲ್ಲಿರುವ ಈ ಕೆಫೆ ಪ್ರಯಾಣಿಕರಿಗೆ ಸುಸಜ್ಜಿತ ವಿಶ್ರಾಂತಿ ತಾಣವಾಗಲಿದ್ದು, ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಹೊಸ ಮೆರುಗು ನೀಡುವ ನಿರೀಕ್ಷೆಯಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7349165511 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.





























































































error: Content is protected !!
Scroll to Top