ಯುದ್ಧ ಅಂತ್ಯಗೊಳಿಸಲು ಇರಾನ್‌ ಸಲ್ಲಿಸಿದ ಹೊಸ ಪ್ರಸ್ತಾವನೆಗೆ ಟ್ರಂಪ್‌ ಅತೃಪ್ತಿ

ವಾಷಿಂಗ್ಟನ್ : ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್ ನೀಡಿರುವ ಇತ್ತೀಚಿನ ಪ್ರಸ್ತಾವನೆಯ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಫೆ. 28ರಂದು ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ನಡೆಸಿದ್ದವು. ಇದು ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಕಾರಣವಾಗಿತ್ತು. ಇದು ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ, ಹಣದುಬ್ಬರ ಹಾಗೂ ಸಾವಿರಾರು ಜನರ ಸಾವಿಗೆ ಕಾರಣವಾಯಿತು. ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಹೊರ್ಮುಜ್ ಜಲಸಂಧಿ ವಿವಾದವು ಇತ್ಯರ್ಥವಾಗುವವರೆಗೆ ಪರಮಾಣು ಕಾರ್ಯಕ್ರಮದ ಕುರಿತಾದ ಚರ್ಚೆಯನ್ನು ಬದಿಗಿರಿಸಬೇಕು ಎಂದು ಇರಾನ್, ಇತ್ತೀಚಿನ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಆದರೆ, ಇರಾನ್‌ನ ಪರಮಾಣು ವಿಷಯವೇ ಮೊದಲ ಆದ್ಯತೆ ಎಂದಿರುವ ಟ್ರಂಪ್, ಇರಾನ್‌ನ ಪ್ರಸ್ತಾವನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಶೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟ್ರಂಪ್ ಅಸಮಾಧಾನವು ಕದನವಿರಾಮದ ಬೆಳವಣಿಗೆಗೆ ಹಿನ್ನಡೆ ಉಂಟು ಮಾಡಿದೆ.



















error: Content is protected !!
Scroll to Top