ಕಾರ್ಕಳ : ಮಿಯ್ಯಾರು ಕುಂಟಿಬೈಲ್ ರಸ್ತೆ ನೀರಿನ ಟ್ಯಾಂಕ್ ಎದುರು ಬೈಕ್ ಹಾಗೂ ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಪರಿಣಾಮ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಸಾವಿಗೀಡಾದ ದಾರುಣ ಘಟನೆ ಎ. 28ರಂದು ಸಂಭವಿಸಿದೆ.
ಕೆರ್ವಾಶೆ ಸುಕೇಶ್ ಬಂಗೇರ (36) ಅವರು ಮೃತಪಟ್ಟ ದುರ್ದೈವಿ. ಕೆರ್ವಾಶೆಯ ತನ್ನ ಮನೆಯಿಂದ ಕುಂಟಿಬೈಲ್ ಆಗಿ ಕಾರ್ಕಳ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕೂಡಲೇ ಸುಕೇಶ್ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಈ ವೇಳೆಗಾಗಲೇ ಮೃತಪಟ್ಟಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಸುಕೇಶ್ ಅವರು ಕೆಲ ತಿಂಗಳಿನಿಂದ ಊರಿನಲ್ಲಿದ್ದರು. ಮೃತರು ತಾಯಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಮಿಯ್ಯಾರು : ಬೈಕ್‌ಗೆ ಸ್ಕೂಟಿ ಡಿಕ್ಕಿ – ಸವಾರ ಸಾವು


















