ರಸ್ತೆಗೆ ಅಡ್ಡ ಬಂದ ದನ ಸ್ಕೂಟಿ ಸ್ಕಿಡ್ ಆಗಿ ತಾಯಿ-ಮಗನಿಗೆ ಗಾಯ

ಹೆಬ್ರಿ: ದನವೊಂದು ರಸ್ತೆಗೆ ಏಕಾಏಕಿ ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿ ಸ್ಕೂಟಿ ಸ್ಕಿಡ್ ಆಗಿ ಬಿದ್ದ ಘಟನೆಯಲ್ಲಿ ತಾಯಿ ಮತ್ತು ಮಗ ಗಾಯಗೊಂಡಿರುವ ಘಟನೆ ತಾಲೂಕಿನ ಕುಚ್ಚೂರು ಗ್ರಾಮದ ಮಾಬ್ಲಾಡಿ ಎಂಬಲ್ಲಿ ಶನಿವಾರ ನಡೆದಿದೆ. ಹೆಬ್ರಿಯ ಎಸ್.ಆರ್. ಶಾಲೆಯಲ್ಲಿ ಕಚೇರಿ ಕೆಲಸ ಮುಗಿಸಿ ಮಗ ಯಕ್ಷೀತ್ (10) ನೊಂದಿಗೆ ಸ್ಕೂಟಿಯಲ್ಲಿ ಮನೆಗೆ ಮರಳುತ್ತಿದ್ದ ಅಕ್ಷತಾ ಎಂಬುವವರು ಅಪಘಾತಕ್ಕೆ ಈಡಾದವರು. ಸಂಜೆ ವೇಳೆಗೆ ಮಾಬ್ಲಾಡಿ ತಲುಪುತ್ತಿದ್ದಂತೆ ದನವೊಂದು ಏಕಾಏಕಿ ಸ್ಕೂಟಿಯತ್ತ ನುಗ್ಗಿ ಬಂದಿದ್ದು, ಡಿಕ್ಕಿ ತಪ್ಪಿಸಲು ಅಕ್ಷತಾ ಅವರು ದಿಢೀರ್ ಬ್ರೇಕ್ ಹಾಕಿದಾಗ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದ ಚರಂಡಿಗೆ ಉರುಳಿದೆ.
​ಈ ಅಪಘಾತದಲ್ಲಿ ಅಕ್ಷತಾ ಅವರ ಬಲಗೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಸಹಸವಾರನಾಗಿದ್ದ ಹತ್ತು ವರ್ಷದ ಬಾಲಕ ಯಕ್ಷೀತ್‌ನ ಬಲಗಾಲಿನ ಮೂಳೆ ಮುರಿತ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣವೇ ಹೆಬ್ರಿಯ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













































\















error: Content is protected !!
Scroll to Top