ಜಾಗದ ವಿಚಾರಕ್ಕೆ ಹಲ್ಲೆ

ಕಾರ್ಕಳ: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಬೆಳ್ಮಣ್ ಗ್ರಾಮದ ಎಂಆರ್‌ಪಿಎಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಮೂಡಬಿದ್ರೆಯ ಹೆನ್ರಿ ಪಿಂಟೋ (65) ಹಲ್ಲೆಗೊಳಗಾದವರು. ಇವರು 2008ರಲ್ಲಿ ಆರೋಪಿ ಮೈಕೆಲ್ ಕುಟಿನ್ಹೋ ಎಂಬುವವರಿಂದ 50 ಸೆಂಟ್ಸ್ ಜಾಗ ಖರೀದಿ ಮಾಡಿದ್ದರು. ಏಪ್ರಿಲ್ 9ರಂದು ಬೆಳಿಗ್ಗೆ ಹೆನ್ರಿ ಅವರು ತಮ್ಮ ಜಾಗದ ಕಸ ಕಡ್ಡಿಗಳಿಗೆ ಬೆಂಕಿ ಹಾಕಿ ಸ್ವಚ್ಛಗೊಳಿಸುತ್ತಿದ್ದಾಗ ಅಲ್ಲಿಗೆ ಬಂದ ಮೈಕೆಲ್ ಬೆಂಕಿ ಹಾಕಲು ನಿನಗೆ ಯಾರು ಹೇಳಿದ್ದು ಎಂದು ಅವಾಚ್ಯವಾಗಿ ಬೈದು ಕುತ್ತಿಗೆಯ ಹಿಂಬದಿಗೆ ಬಲವಾಗಿ ಹೊಡೆದಿದ್ದಾರೆ ಎನ್ನಲಾಗಿದೆ.
​ಹಲ್ಲೆಯಿಂದಾಗಿ ಹೆನ್ರಿ ಅವರು ಸ್ಮೃತಿ ತಪ್ಪಿ ಬಿದ್ದಿದ್ದು, ಈ ವೇಳೆ ಆರೋಪಿಯು ಬೆಂಕಿ ಇದ್ದ ಕೋಲಿನಿಂದ ಅವರ ಎರಡೂ ಕಾಲುಗಳ ಮೀನ ಖಂಡಗಳಿಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಮೃತಿ ತಪ್ಪಿದ್ದ ಹೆನ್ರಿ ಅವರನ್ನು ಆರೋಪಿಯ ಮಗ ಹಾಗೂ ಇತರರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಜಾಗವನ್ನು ತನಗೇ ವಾಪಸ್‌ ನೀಡಬೇಕೆಂದು ಬೆದರಿಸುತ್ತಿದ್ದ ಮೈಕೆಲ್ ಇದೇ ದ್ವೇಷದಲ್ಲಿ ಹಲ್ಲೆ ನಡೆಸಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































error: Content is protected !!
Scroll to Top