ಸರಕಾರದಿಂದಲೇ 108 ಆಂಬುಲೆನ್ಸ್ ಸೇವೆ ನಿರ್ವಹಣೆ

ಹಾವೇರಿ : ರಾಜ್ಯದಲ್ಲಿರುವ 108 ಆಂಬುಲೆನ್ಸ್ ಸೇವೆಯನ್ನು ಇನ್ನು ಮುಂದೆ ಸರ್ಕಾರದಿಂದ ಮುನ್ನಡೆಸಲು ತಯಾರಿ ನಡೆದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. ಶಿಗ್ಗಾವಿ ತಾಲೂಕು ಆಸ್ಪತ್ರೆಯ ಕಟ್ಟಡ ಉದ್ಘಾಟನೆಗಾಗಿ ಆಗಮಿಸಿದ್ದ ದಿನೇಶ್‌ ಗುಂಡೂರಾವ್ ಸುದ್ದಿಗಾರರೊಂದಿಗೆ ಮಾತನಾಡುತ್ತ, ಆಂಬುಲೆನ್ಸ್ ನಿರ್ವಹಣೆಗೆ ಅಗತ್ಯವಿರುವ ಕಂಟ್ರೋಲ್ ರೂಮ್ ಹಾಗೂ ಸಲಕರಣೆಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ಇನ್ನೊಂದು ತಿಂಗಳಿಂದ ಸಂಪೂರ್ಣ ಸೇವೆ ಸರಕಾರದಿಂದ ನೀಡಲಾಗುವುದು. ಇಡೀ ದೇಶದಲ್ಲಿಯೇ ಸರ್ಕಾರದಿಂದ ಆಂಬುಲೆನ್ಸ್ ಸೇವೆ ನೀಡುವ ಮೊದಲ ರಾಜ್ಯ ಕರ್ನಾಟಕ ಆಗಲಿದೆ ಎಂದವರು ತಿಳಿಸಿದರು.





























































































error: Content is protected !!
Scroll to Top