ಕಾರ್ಕಳ : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಸಹಯೋಗದಲ್ಲಿ ನಡೆಯುವ ತಿಂಗಳ ಸರಣಿಯ ಮೌಲ್ಯಸುಧಾ ಕಾರ್ಯಕ್ರಮದ 50ನೇ ಮಾಲಿಕೆಯ ಸುವರ್ಣ ಸಂಭ್ರಮ ಜು. 11ರಂದು ಸಂಜೆ 6:30ಕ್ಕೆ ನಡೆಯಲಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಷ್ಟ್ರದೇವೋಭವ ಖ್ಯಾತಿಯ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಸನಾತನ ರಾಷ್ಟ್ರಾಂಜಲಿ ಎಂಬ ವಿಶೇಷ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಕಲಾಸಕ್ತರೂ ಭಾಗವಹಿಸಬಹುದೆಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
ಜು. 11 : ಮೌಲ್ಯಸುಧಾ – ಸುವರ್ಣ ಮಾಲಿಕೆಯ ಸಂಭ್ರಮ – ಸನಾತನ ರಾಷ್ಟ್ರಾಂಜಲಿ








