ಎಸ್‌ಕೆಪಿಎ ಕಾರ್ಕಳ ವಲಯ – ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ : ಸೌತ್‌ ಕೆನರಾ ಫೋಟೋಗ್ರಾಫರ್‌ ಅಸೋಸಿಯೇಶನ್‌ ಕಾರ್ಕಳ ವಲಯ ವತಿಯಿಂದ ವಲಯದ ಸದಸ್ಯರಿಗಾಗಿ ಜು.8ರಂದು ಕಾರ್ಕಳ ರಥಬೀದಿಯ ಜೋಶಿ ಕನ್ಸಲ್‌ಟೆನ್ಸಿ ಕ್ಲಿನಿಕ್‌ನಲ್ಲಿ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಕಳ ಘಟಕದ ಅಧ್ಯಕ್ಷ ಡಾ. ರಾಮಚಂದ್ರ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕುಟುಂಬದಂತೆ ತನ್ನ ಸದಸ್ಯರ ಆರೋಗ್ಯದ ಕಾಳಜಿಯೊಂದಿಗೆ ಪ್ರತಿವರ್ಷ ಆರೋಗ್ಯ ಶಿಬಿರ ನಡೆಸಿಕೊಂಡು ಬರುತ್ತಿರುವ ಎಸ್‌ಕೆಪಿಎ ಕಾರ್ಕಳ ವಲಯದ ಕಾರ್ಯವೈಖರಿ ಮಾದರಿ. ಈ ರೀತಿಯ ಕಾರ್ಯಕ್ರಮ ತಂಡದಿಂದ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಕಳೆದ ಸುಮಾರು 10 ವರ್ಷಗಳಿಂದ ಎಸ್‌ಕೆಪಿಎ ಸದಸ್ಯರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿರುವ ಡಾ. ರಾಮಚಂದ್ರ ಜೋಶಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಎಸ್‌ಕೆಪಿಎ ಕಾರ್ಕಳ ವಲಯ ಅಧ್ಯಕ್ಷ ಪ್ರಮೋದ್‌ ಚಂದ್ರ ಪೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಎಸ್‌ಕೆಪಿಎ ದ.ಕ.-ಉಡುಪಿ ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೇಯ ಹಿರಿಯಂಗಡಿ, ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪದ್ಮಪ್ರಸಾದ್‌ ಜೈನ್‌, ಕಾರ್ಕಳ ವಲಯ ಗೌರವಾಧ್ಯಕ್ಷ ಟಿ.ವಿ. ಸುಶೀಲ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಶೇಖರ್‌ ಕುಕ್ಕುಜೆ, ರೆಡ್‌ಕ್ರಾಸ್‌ ಸಂಸ್ಥೆಯ ಸದಸ್ಯರಾದ ವಸಂತ ಎಂ. ಮತ್ತು ಮೋಹನ್‌ದಾಸ್‌ ಶೆಣೈ ಉಪಸ್ಥಿತರಿದ್ದರು. ಪ್ರಸಾದ್‌ ಐಸಿರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



















error: Content is protected !!
Scroll to Top