ಕಾರ್ಕಳ: ಬೈಲೂರಿನ ಪ್ರಸಿದ್ಧ ಉದ್ಯಮಿ ಹಾಗೂ ಸಮಾಜಸೇವಕ ಲಯನ್ ರಾಮಕೃಷ್ಣ ಶೆಟ್ಟಿಯವರ ನಿಧನಕ್ಕೆ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ವ್ಯವಹಾರ ಕ್ಷೇತ್ರದ ಸಾಧನೆಯೊಂದಿಗೆ ಲಯನ್ಸ್ ಸಂಸ್ಥೆಯ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದ ರಾಮಕೃಷ್ಣ ಶೆಟ್ಟಿಯವರ ನಿಧನವು ತೀವ್ರ ದುಃಖ ತಂದಿದೆ ಎಂದು ಮುನಿಯಾಲು ಹೇಳಿದ್ದಾರೆ. ಅವರ ಸರಳ ವ್ಯಕ್ತಿತ್ವ, ಸೇವಾ ಮನೋಭಾವ ಬೈಲೂರು ಹಾಗೂ ಕಾರ್ಕಳ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಉದ್ಯಮಿ ರಾಮಕೃಷ್ಣ ಶೆಟ್ಟಿ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಶ್ರದ್ಧಾಂಜಲಿ






































































