ಹಿಂದೂಗಳ ಧಾರ್ಮಿಕ ವಿಷಯವನ್ನು ದುರುಪಯೋಗ ಪಡಿಸಿಕೊಂಡದ್ದಕ್ಕೆ ಪೊಲೀಸರಿಂದ ಬಂಧನ
ತಿರುನಲ್ವೇಲಿ: ರೆಸ್ಟೋರೆಂಟ್‌ನ ಹೊರಗೆ ಗಣಪತಿ ಬಿರಿಯಾನಿ ತಿನ್ನುವ ಪೋಸ್ಟರ್ ಹಚ್ಚಿದ್ದ ಮಾಲೀಕನನ್ನು ಪೊಲೀಸರು ಬಂಧಿಸಿದ ಘಟನೆ ತಮಿಳುನಾಡಿನ ತಿರುನಲ್ವೇಲಿ ಎಂಬಲ್ಲಿ ನಡೆದಿದೆ.
ಬಂಧಿತನನ್ನು ಜಯಂತ್ (30)ಎಂದು ಗುರುತಿಸಲಾಗಿದೆ.

ಈ ಬಗ್ಗೆ ಸೆಲ್ವರಾಜ್ ಎಂಬವರು ದೂರು ನೀಡಿದ್ದು ಹಿಂದೂ ದೇವರನ್ನು ಅಗೌರವಯುತವಾಗಿ, ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿದೆ. ಬಿರಿಯಾನಿ ಅಂಗಡಿಯ ಮುಂದೆ ಗಣಪತಿ ದೇವರು ಬ್ರಿಯಾನ್ ತಿನ್ನುವಂತೆ ಪೋಸ್ಟರ್ ರಚಿಸಿ ಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




































































