ಕಾರ್ಕಳ:, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಡೆವಲಪ್‌ಮೆಂಟ್ ಟ್ರಸ್ಟ್ (ರಿ.) ಇದರ ವತಿಯಿಂದ ನಿರ್ಮಿಸಲ್ಪಡುವ “ವಿಶ್ವಕರ್ಮ ಸಮುದಾಯ ಭವನ” ನಿರ್ಮಾಣ ಕಾರ್ಯದ ಪೂರ್ವಭಾವಿಯಾಗಿ ಸಾಮೂಹಿಕ ಶ್ರೀ ನವಚಂಡಿಕಾ ಹೋಮವನ್ನು ನೆರವೇರಿಸುವುದಾಗಿ ನಿರ್ಣಯಿಸಲಾಗಿದ್ದು ಈ ಸಂಬಂಧ ಸಮಾಲೋಚನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಸಲಹಾ ಸಮಿತಿ, ಪೇಟೆಯ ಹತ್ತು ಸಮಸ್ಥರು, ಶ್ರೀ ಕ್ಷೇತ್ರದ ಕೂಡುವಳಿಕೆ ಮೊಕ್ತೇಸರುಗಳು, ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿ, ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ, ವಿ.ಬಿ.ಎಸ್. ಸಭಾ ಪೆರ್ವಾಜೆ, ಚಿನ್ನದ ಕೆಲಸಗಾರರ ಸಂಘ, ಮರದ ಕೆಲಸಗಾರರ ಸಂಘ, ಶ್ರೀ ಕ್ಷೇತ್ರದ ಪುರೋಹಿತ ವೃಂದ ಹಾಗೂ ಸಮಾಜ ಬಾಂಧವರ ಸಮ್ಮುಖದಲ್ಲಿ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ನ್ಯಾಯವಾದಿ ಪ್ರಕಾಶ್ ಆಚಾರ್ಯ ವಹಿಸಿದ್ದು, ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರವಿ ಆಚಾರ್ಯ, ಜೊತೆ ಮೊಕ್ತೇಸರ ನಿಟ್ಟೆ ಸುರೇಶ್ ಆಚಾರ್ಯ ಮತ್ತು ಕೆ. ವಸಂತ್ ಆಚಾರ್ಯ, ಕಾರ್ಯದರ್ಶಿ ಶಿಲ್ಪಿ ಸತೀಶ್ ಆಚಾರ್ಯ ಉಪಸ್ಥಿತರಿದ್ದರು.

ಶೋಭಾ ಆಚಾರ್ಯ ಪ್ರಾರ್ಥಿಸಿ, ಅಧ್ಯಕ್ಷರು ಪ್ರಕಾಶ ಆಚಾರ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಸುಧಾಕರ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು., ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಎಂ. ರಮೇಶ್ ಆಚಾರ್ಯ ಧನ್ಯವಾದ ಸಮರ್ಪಿಸಿದರು.


































































