ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ, 1985 – ಕಾನೂನು ಮಾಹಿತಿ

ಮಾದಕ ವಸ್ತುಗಳ ಬಳಕೆಯು ನಾವು ಇಂದು ನಮ್ಮ ಸಮಾಜದಲ್ಲಿ ಕಾಣುತ್ತಿರುವ ಗಂಭೀರವಾದ ಸಾಮಾಜಿಕ ಸಮಸ್ಯೆಗಳ ಪೈಕಿ ಅತ್ಯಂತ ಘೋರ ಸಮಸ್ಯೆಯಾಗಿರುತ್ತದೆ. ಮಾದಕ ವಸ್ತುವೆಂಬುವುದು ಕೇವಲ ವ್ಯಕ್ತಿಯ ಆರೋಗ್ಯವನ್ನು ನಾಶಮಾಡುವ ವಸ್ತು ಮಾತ್ರವಲ್ಲದೆ ಇಡೀ ಸಮಾಜದ ಶಾಂತಿ, ಸುವ್ಯವಸ್ಥೆ ಮತ್ತು ಭದ್ರತೆಗೆ ಆಪಾಯವನ್ನು ಉಂಟುಮಾಡುತ್ತಿದೆ. ಮಾತ್ರವಲ್ಲದೆ ನಮ್ಮ ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ಯುವಜನರ ಶಕ್ತಿಯನ್ನು ಕುಂದಿಸಿ ಅವರ ಜೀವನವನ್ನೆ ನಾಶಮಾಡುತ್ತಿದೆ. ಮಾದಕ ದ್ರವ್ಯಗಳ ಸೇವನೆಯು ಪ್ರತಿಯೊಬ್ಬರ ಸಮಯ, ಹಣ, ಆರೋಗ್ಯ, ವಿದ್ಯಾಭ್ಯಾಸ, ಉದ್ಯೋಗ ಮತ್ತು ಸಂಬಂಧಗಳ ಜೊತೆಗೆ ಜೀವನದ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ. ಈ ಎಲ್ಲಾ ಕಾರಣದಿಂದ ಸರಕಾರವು ನಮ್ಮ ದೇಶದಲ್ಲಿ ಮಾದಕ ವಸ್ತುಗಳ ನಿಯಂತ್ರಣ ಮತ್ತು ನಿಷೇಧ ಹೇರುವ ಉದ್ದೇಶದಿಂದ ಅಂದರೆ ಮಾದಕ ವಸ್ತುಗಳ ಅಕ್ರಮ ಸ್ವಾಧೀನತೆ, ಮಾರಾಟ, ಸಾಗಾಟ, ವಿತರಣೆ ಮತ್ತು ಬಳಕೆಗೆ ಸಮ್ಮಂದಿಸಿದಂತೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ, 1985 ಎಂಬ ಕಾನೂನನ್ನು ತಿದ್ದುಪಡಿಗೊಳಿಸುವ ಮೂಲಕ ಇನ್ನಷ್ಟು ಬಲಪಡಿಸಿರುತ್ತದೆ.


ಮಾದಕ ದ್ರವ್ಯಗಳನ್ನು ಕೆಲವು ಸಂದರ್ಭಗಳಲ್ಲಿ ವೈದ್ಯಕೀಯ ಮತ್ತು ವೈಜ್ಞಾನಿಕ ಬಳಕೆಗಾಗಿ ಉಪಯೋಗಿಸುವ ಅವಶ್ಯಕತೆ ಇರುತ್ತದೆ. ಮಾದಕ ದ್ರವ್ಯಗಳು ಎಂದರೆ ನೈಸರ್ಗಿಕವಾಗಿ ಸಿಗುವ ಅಮಲು ಪದಾರ್ಥಗಳಾದ ಗಾಂಜಾ, ಚರಸ್, ಅಫೀಮು ಮತ್ತು ಕೊಕೇನ್ ಇತ್ಯಾದಿ ದ್ರವ್ಯಗಳಾಗಿರುತ್ತದೆ. ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇರುವುದಕ್ಕೆ ವಾಹನವನ್ನು ಚಲಾಯಿಸುವ ಸಂಧರ್ಭದಲ್ಲಿ ಚಾಲಕರು ಮಾದಕ ದ್ರವ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಸಹಾ ಒಂದು ಪ್ರಮುಖ ಕಾರಣವಾಗಿರುತ್ತದೆ. ಈ ನಿಟ್ಟಿನಲ್ಲಿ ಸರಕಾರವು ರಸ್ತೆ ಸುರಕ್ಷತೆಯ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೋಟಾರು ವಾಹನ ಕಾಯ್ದೆ, ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ ಮತ್ತು ರಾಜ್ಯ ರಸ್ತೆ ಸುರಕ್ಷತಾ ಕಾಯ್ದೆಗಳನ್ನು ಬಹಳಷ್ಟು ತಿದ್ದುಪಡಿಗೊಳಿಸಿ ಮಾದಕ ದ್ರವ್ಯ ಸೇವಿಸಿ ವಾಹನವನ್ನು ಚಲಾಯಿಸುವುದನ್ನು ನಿಯಂತ್ರಿಸಲು ಬಹಳಷ್ಟು ಕ್ರಮಗಳನ್ನು ಕೈಗೊಂಡಿರುತ್ತದೆ.

ಸಾಮಾನ್ಯವಾಗಿ ಮಾದಕದ್ರವ್ಯ ಸೇವನೆಯ ಪ್ರಭಾವದಿಂದ ಸಂಬಂಧಪಟ್ಟ ಚಾಲಕರು ತಮ್ಮ ವಾಹನದ ಮೇಲಿನ ನಿಯಂತ್ರಣವನ್ನು ಕಳಕೊಳ್ಳುವುದರಿಂದ ಇಂತಹ ಸ್ಥಿತಿಯಲ್ಲಿ ವಾಹನ ಚಾಲನೆ ಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಘೋಷಿಸಲ್ಪಟ್ಟಿದೆ. ಇತರ ಅನ್ವಯ ಮದ್ಯ ಅಥವಾ ಮಾದಕ ದ್ರವ್ಯ ಸೇವನೆಯ ಪ್ರಭಾವದಲ್ಲಿರುವ ವಾಹನ ಚಾಲಕರು ವಾಹನವನ್ನು ಚಲಾಯಿಸಿದಲ್ಲಿ ಇದನ್ನು ಅಪರಾಧವೆಂದು ಪರಿಗಣಿಸಿ ಮೊದಲ ಅಪರಾಧಕ್ಕೆ 6 ತಿಂಗಳ ಜೈಲು ಶಿಕ್ಷೆ ಅಥವಾ 10 ಸಾವಿರ ರೂಪಾಯಿ ದಂಡ ಹಾಗೂ 2 ನೇ ಅಥವಾ ಆನಂತರ ಅಪರಾಧಕ್ಕೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 15 ಸಾವಿರ ರೂಪಾಯಿ ದಂಡ ಅಥವಾ ಇವೆರಡರಿಂದಲೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇತ್ತೀಚಿಗೆ ಹೈಕೋರ್ಟಿನ ತೀರ್ಪಿನ ಪ್ರಕಾರ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸಿ ಯಾವುದೇ ವಾಹನವನ್ನು ಚಲಾಯಿಸುವ ವ್ಯಕ್ತಿಯಿಂದಾಗಿ ಅಪಘಾತ ಸಂಭವಿಸಿದಲ್ಲಿ ಇಂತಹ ಚಾಲನೆಯನ್ನು ಸಹಪಾಲು ನಿರ್ಲಕ್ಷತನದ ಚಾಲನೆ (ಕಾಂಟ್ರಿಬ್ಯೂಟರಿ ನೆಗ್ಲಿಜೆನ್ಸ್) ಎಂದು ಪರಿಗಣಿಸಿ ಅಪಘಾತದ ಕುರಿತು ಪರಿಹಾರದ ಮೊತ್ತವನ್ನು ಕಡಿತಗೊಳಿಸಿರುತ್ತದೆ.


ಮಾತ್ರವಲ್ಲದೆ ಮದ್ಯ ಅಥವಾ ಮಾದಕ ದ್ರವ್ಯ ಸೇವನೆ ಮಾಡಿ ವಾಹನ ಚಲಾಯಿಸುವುದು ಚಾಲಕನಿಗೆ ಹಾಗೂ ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಸಾರ್ವಜನಿಕರಿಗೂ ಅಪಾಯ ಉಂಟುಮಾಡುವ ಸಾಧ್ಯತೆ ಹೆಚ್ಚಳವಾಗಿರುತ್ತದೆ. ಮಾತ್ರವಲ್ಲದೆ ಇಂತಹ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾದ ಸಾರ್ವಜನಿಕರಿಗೆ ಪರಿಹಾರ ನೀಡಬೇಕಾಗುವ ಜವಾಬ್ದಾರಿಯನ್ನು ಸಹಾ ತಪ್ಪಿತಸ್ಥ ಚಾಲಕನು ಹೊಂದಿರುತ್ತಾನೆ. ಮೋಟಾರು ವಾಹನ ಕಾಯ್ದೆಯ ನಿಯಮ 185ರ ಪ್ರಕಾರ ವಾಹನ ಚಾಲಕನು ಯಾವುದೇ ಮಾದಕ ದ್ರವ್ಯವನ್ನು ಸೇವಿಸಿ ಅದರ ಪ್ರಭಾವದಿಂದ ವಾಹನದ ಸರಿಯಾದ ನಿಯಂತ್ರಣ ಸಾಧಿಸಲು ಅಸಮರ್ಥನಾದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ಕಾರಣದಿಂದಾಗಿ ಮಾದಕ ದ್ರವ್ಯ ಸೇವನೆಯ ಕಾರಣದಿಂದಾಗಿ ಅಪಘಾತ ಸಂಭವಿಸಿದಲ್ಲಿ ಸೂಕ್ತ ವಿಚಾರಣೆ ನಡೆಸಿ ಸಮ್ಮಂಧಪಟ್ಟ ಚಾಲಕನ ಡ್ರೈವಿಂಗ್ ಲೈಸನ್ಸ್ ರದ್ದುಪಡಿಸುವ ಅಧಿಕಾರವನ್ನು ಸಮ್ಮಂದಪಟ್ಟ ಸಾರಿಗೆ ಅಧಿಕಾರಿಗಳು ಹೊಂದಿರುತ್ತಾರೆ. ಮಾತ್ರವಲ್ಲದೆ ಈ ಸಂಧರ್ಭದಲ್ಲಿ ಚಾಲಕನಿಗೆ ವಾಹನವನ್ನು ಚಲಾಯಿಸಲು ಒಪ್ಪಿಗೆ ನೀಡಿದ ಸಮ್ಮಂಧಪಟ್ಟ ವಾಹನದ ಮಾಲೀಕರು ಸಹಾ ಅಪರಾಧ ನಡೆಸಿದಂತಾಗುತ್ತದೆ.

















































error: Content is protected !!
Scroll to Top