ಆಹಾರ ಪ್ಯಾಕೆಟ್‌ಗಳ‌ ಮೇಲೆ ಎಚ್ಚರಿಕೆಯ ಗುರುತು ಕಡ್ಡಾಯಕ್ಕೆ ಮುಂದಾದ ಸುಪ್ರೀಂ ಕೋರ್ಟ್

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮಹತ್ವದ ಕ್ರಮ

ನವದೆಹಲಿ: ದೇಶದಲ್ಲಿ ಸಕ್ಕರೆ, ಉಪ್ಪು, ಕೊಬ್ಬಿನಾಂಶ ಅಧಿಕವಾಗಿರುವ ಆಹಾರಗಳ ಪ್ಯಾಕೆಟ್ ಮೇಲೆ ಎಚ್ಚರಿಕೆಯ ಲೇಬಲ್ ಕಡ್ಡಾಯ ಎನ್ನುವ ಕುರಿತಂತೆ ವಿಸ್ತೃತವಾದ ಆದೇಶವನ್ನು ಶೀಘ್ರದಲ್ಲೇ ಹೊರಡಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

ಸಾರ್ವಜನಿಕರು, ಬೆಳೆಯುವ ಮಕ್ಕಳ ಮೇಲೆ ಇವುಗಳ ಗಂಭೀರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳ ಸೇವನೆಯ ದುಷ್ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಈ ಕ್ರಮಕ್ಕೆ ಮುಂದಾಗಿದೆ.

ಈ ಸಂಬಂಧ ಬಂದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಮೂರ್ತಿಗಳಾದ ಜೆ.ಬಿ. ಪದೀವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ‌ವಿಭಾಗೀಯ ಪೀಠ ಈ ಕ್ರಮಕ್ಕೆ ಮುಂದಾಗಿರುವುದಾಗಿದೆ.

ಈಗ ಸಾಗುತ್ತಿರುವ ಆಹಾರಗಳಲ್ಲಿ ಅದರ ಕುರಿತಾದ ಮಾಹಿತಿ ವಿವರ ಪೊಟ್ಟಣದ ಹಿಂಭಾಗದಲ್ಲಿ ಇದೆ. ಉಪ್ಪು, ಸಕ್ಕರೆ, ಕೊಬ್ಬಿನಾಂಶ ಅಧಿಕವಿರುವ ಆಹಾರಗಳನ್ನು ಗುರುತು ಹಿಡಿಯಲು ಬೇರೆ ಯಾವುದಾದರೂ ಸ್ಪಷ್ಟ ಮಾರ್ಗಗಳಿವೆಯೇ ಎನ್ನುವುದನ್ನು ಸಹ ಕೋರ್ಟ್ FSSAI ಯನ್ನು ಪ್ರಶ್ನಿಸಿದೆ.

















































































error: Content is protected !!
Scroll to Top