ಅ.30 : ಸಾಣೂರಿನಲ್ಲಿ ವೈದ್ಯಕೀಯ ಉಚಿತ ಶಿಬಿರ

ಕಾರ್ಕಳ: ಆಳ್ವಾಸ್‌ ಆಯುರ್ವೇದಿಕ್‌ ಹಾಸ್ಪಿಟಲ್‌ ಆಂಡ್‌ ಕಾಲೇಜ್‌ ಮತ್ತು ಮಂಗಳೂರಿನ ಮಂಗಳಾ ಆಯುರ್ವೇದಿಕ್‌ ಹಾಸ್ಪಿಟಲ್‌ ಆಂಡ್‌ ಕಿಡ್ನಿ ಫೌಂಡೇಶನ್‌ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಅ.30ರಂದು ಸಾಣೂರು ಸರಕಾರಿ ಪಿಯು ಕಾಲೇಜು ಕ್ಯಾಂಪಸ್‌ನಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯ ತನಕ ನಡೆಯಲಿದೆ.

ಸಾಮಾನ್ಯ ಆರೋಗ್ಯ ತಪಾಸಣೆ, ಸ್ತ್ರೀರೋಗ ತಜ್ಞರಿಂದ ತಪಾಸಣೆ, ಕಣ್ಣು, ಕಿವಿ, ಮೂಗು, ಗಂಟಲು ತಪಾಸಣೆ, ಕಿವಿ ಪರೀಕ್ಷೆ ಮತ್ತು ಸ್ಕ್ರೀನಿಂಗ್‌, ಶ್ರವಣ ಉಪಕರಣ ಅಳವಡಿಕೆ ಮತ್ತು ಪರಿಶೀಲನೆ, ಫಿಸಿಯೋಥೆರಪಿ ಮತ್ತು ಸೈಕಾಲಾಜಿಕಲ್‌ ಸಹಾಯ, ಬಾಲ್ಯದ ಸಮಸ್ಯೆಗಳ ಅವಲೋಕನ, ಮಧುಮೇಹ, ರಕ್ತದೊತ್ತಡ, ಒತ್ತಡ ನಿವಾರಣೆ ಸಲಹೆಗಳು ಇತ್ಯಾದಿ ಪರಿಹಾರಗಳನ್ನು ಶಿಬಿರದಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 87222 72116 / 99861 61239 ಈ ನಂಬರ್‌ಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

















































































error: Content is protected !!
Scroll to Top