ಸಿಡಿಲು ಬಡಿದು ಮೊಬೈಲ್ ಟವರ್‌ಗೆ ಹಾನಿ

ಮೂಡುಬಿದಿರೆ: ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲು ಪರಿಸರದಲ್ಲಿ ಗುರುವಾರ ಸಿಡಿಲು ಬಡಿದು ಮೊಬೈಲ್ ಟವರ್‌ಗೆ ಹಾನಿಯಾಗಿದೆ.

ಈ ಭಾಗದ ಹಲವು ಮನೆಗಳ ವಿದ್ಯುತ್ ಉಪಕರಣಗಳು ಹಾಳಾಗಿದ್ದು, ಟವರ್ ಸಮೀಪ ಮನೆ ಹೊಂದಿದ್ದ ಕಡಂದಲೆಯ ಪತ್ರಕರ್ತ ಜಗದೀಶ್ ಪೂಜಾರಿ ಅವರ ಕಾಲಿಗೂ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಗುರುವಾರ ರಾತ್ರಿ ಕಡಂದಲೆ ಪರಿಸರದಲ್ಲಿ ಸಂಭವಿಸಿದ ಸಿಡಿಲಿನ ಆಘಾತದಿಂದ ಮೊಬೈಲ್ ಟವರ್‌ಗೆ ಹಾನಿಯಾಗಿದ್ದು, ಟವರ್ಗೆ ಬಡಿದ ಸಿಡಿಲು ಪಕ್ಕದ ಮನೆಗಳಿಗೂ ಬೆಂಕಿಯ ಜ್ವಾಲೆ ಹಬ್ಬಿಸಿತು. ಮೊಬೈಲ್ ನೆಟ್‌ವರ್ಕ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.















































































error: Content is protected !!
Scroll to Top