ಮಂಜಿಷ್ಠ ಉಪಯೋಗಗಳು

ಮುಖದ ಸೌಂದರ್ಯವನ್ನು ಹೆಚ್ಚಿಸುವ ಮಂಜಿಷ್ಠದ ತಿಳಿದುಕೊಳ್ಳೋಣ. ಆಯುರ್ವೇದದಲ್ಲಿ “ವರ್ಣ್ಯ” ಮತ್ತು “ರಕ್ತಶೋಧಕ” ಗಿಡಗಳಲ್ಲಿ ಮಂಜಿಷ್ಠಕ್ಕೆ ಮೊದಲ ಸ್ಥಾನವಿದೆ. ಇದರ ವೈಜ್ಞಾನಿಕ ಹೆಸರು Rubia cordifolia ಮತ್ತು ಕುಟುಂಬ Rubiaceae.

  1. ಮಂಜಿಷ್ಠದ ಗುಣಲಕ್ಷಣಗಳು –
  • ರಸ – ಕಷಾಯ, ತಿಕ್ತ, ಮಧುರ
  • ಗುಣ : ಗುರು, ರುಕ್ಷ
  • ವೀರ್ಯ – ಉಷ್ಣ
  • ವಿಪಾಕ – ಕಟು
  • ಕಫ-ಪಿತ್ತ ಶಾಮಕ. ವಾತವನ್ನು ಸಮತೋಲನದಲ್ಲಿಡುತ್ತದೆ.

ಸಂಸ್ಕೃತದಲ್ಲಿ ಇದನ್ನು “ಕಾಲಮೇಘಿ”, “ಜಿಂಗಿ”, “ರಂಜನಿ” ಎಂದು ಕರೆಯುತ್ತಾರೆ. “ರಂಜನಿ” ಎಂದರೆ “ಬಣ್ಣ ನೀಡುವವಳು” ಎಂದರ್ಥ. ಏಕೆಂದರೆ ಇದರ ಬೇರುಗಳಿಂದ ಕೆಂಪು ಬಣ್ಣದ ಬಣ್ಣ ತಯಾರಿಸುತ್ತಾರೆ.ಮಂಜಿಷ್ಠದ ಬೇರು ಮತ್ತು ಕಾಂಡದಲ್ಲಿ anthraquinones, rubiadin, manjistin, purpurin ಇರುತ್ತವೆ. ಇವುಗಳೇ ಇದರ ರಕ್ತ ಶುದ್ಧಿ ಮತ್ತು ಉರಿಯೂತ ನಿವಾರಕ ಗುಣಕ್ಕೆ ಕಾರಣ. ಇದರ ಜೊತೆಗೆ iridoids ಮತ್ತು glycosides ಕೂಡ ಇರುವುದರಿಂದ ಇದು ಪ್ರಬಲ ಆಂಟಿ-ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ.

ಮಂಜಿಷ್ಠದ ಔಷಧೀಯ ಉಪಯೋಗಗಳು-
ಮಂಜಿಷ್ಠವನ್ನು “ರಕ್ತದೊತ್ತಡದ ಮೂಲಿಕೆ” ಎನ್ನುತ್ತಾರೆ. ರಕ್ತವನ್ನು ಶುದ್ಧಿ ಮಾಡಿ, ರಕ್ತ ಪರಿಚಲನೆ ಸುಧಾರಿಸುತ್ತದೆ. ಮೊಡವೆ, ಕಪ್ಪು ಕಲೆ, ಎಸ್ಜಿಮಾ, ಸೋರಿಯಾಸಿಸ್ ನಂತಹ ಚರ್ಮ ರೋಗಗಳಲ್ಲಿ ಬಹಳ ಉಪಯುಕ್ತ. ರಕ್ತಸ್ರಾವ, ಅತಿಯಾದ ಮುಟ್ಟು, ಫೈಬ್ರಾಯ್ಡ್ ನಲ್ಲಿ ರಕ್ತಸ್ರಾವ ಕಡಿಮೆ ಮಾಡುತ್ತದೆ. ಲಿವರ್ ನಿಂದ ಟಾಕ್ಸಿನ್ ಹೊರಹಾಕಿ ಕಾಮಾಲೆಗೂ ಸಹಾಯ ಮಾಡುತ್ತದೆ.

ಚರ್ಮ ಮತ್ತು ಸೌಂದರ್ಯಕ್ಕೆ ಉಪಯೋಗಿಸುತ್ತಾರೆ. ಇದು “ವರ್ಣ್ಯ” ಎಂದರೆ ಚರ್ಮಕ್ಕೆ ಕಾಂತಿ ನೀಡುತ್ತದೆ. ಅನೇಕ ಫೇಸ್ ಪ್ಯಾಕ್ ಮತ್ತು ಲೇಪನಗಳಲ್ಲಿ ಮಂಜಿಷ್ಠ ಇರುತ್ತದೆ.ಮೊಡವೆ ಗುರುತು, ಕಲೆ, ಮಚ್ಚೆ ನಿವಾರಿಸುತ್ತದೆ. ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುತ್ತದೆ. ಗಾಯ ಬೇಗ ವಾಸಿಯಾಗಲು ಸಹಾಯ ಮಾಡುತ್ತದೆ.

ಮೂಳೆ ಮತ್ತು ಕೀಲು ನೋವಿಗೆ ಉಪಯೋಗಿಸುತ್ತಾರೆ.ಇದು ಮೂತ್ರವರ್ಧಕ ಮತ್ತು ಉರಿಯೂತ ನಿವಾರಕ. ಆದ್ದರಿಂದ ಗೌಟ್, ಸಂಧಿವಾತ, ಮೂಳೆ ಮುರಿತದ ನಂತರದ ನೋವಿಗೆ ಬಳಸುತ್ತಾರೆ. ಮೂತ್ರಪಿಂಡದ ಕಲ್ಲು ಕರಗಿಸಲು ಸಹಾಯ ಮಾಡುತ್ತದೆ. ಮುಟ್ಟಿನ ಸಮಸ್ಯೆ, PCOD, ಎಂಡೊಮೆಟ್ರಿಯೊಸಿಸ್ ನಲ್ಲಿ ರಕ್ತ ಪರಿಚಲನೆ ಸರಿಮಾಡುತ್ತದೆ. ಗರ್ಭಾಶಯವನ್ನು ಬಲಪಡಿಸುತ್ತದೆ.

ಹೇಗೆ ಉಪಯೋಗಿಸುವುದು?
ಪುಡಿ, ಕಷಾಯ, ಮಾತ್ರೆ, ಎಣ್ಣೆ, ಫೇಸ್ ಪ್ಯಾಕ್ ರೂಪದಲ್ಲಿ ಉಪಯೋಗಿಸುತ್ತಾರೆ.

  1. ಚರ್ಮರೋಗ ಹಾಗೂ ರಕ್ತಶುದ್ಧಿಗೆ ಕಷಾಯ ಮಾಡಿ ಕುಡಿಯಬಹುದು.ಕಷಾಯ ಮಾಡುವ ವಿಧಾನ- 1 ಚಮಚ ಮಂಜಿಷ್ಠ ಪುಡಿಯನ್ನು 2 ಲೋಟ ನೀರಿಗೆ ಹಾಕಿ ಅರ್ಧಕ್ಕೆ ಇಳಿಯುವವರೆಗೆ ಕುದಿಸಿ. ದಿನಕ್ಕೆ 2 ಬಾರಿ 30ml ಕುಡಿಯಬಹುದು. ಚರ್ಮ ರೋಗ ಮತ್ತು ರಕ್ತ ಶುದ್ಧಿಗೆ
  2. ಪುಡಿಯನ್ನು ಊಟದ ನಂತರ ¼ ರಿಂದ ½ ಚಮಚ ಜೇನು ಅಥವಾ ತುಪ್ಪದೊಂದಿಗೆ ಸೇವಿಸಬಹುದು.
  3. ಫೇಸ್ ಪ್ಯಾಕ್ – ಮಂಜಿಷ್ಠ ಪುಡಿ + ಅರಿಶಿನ + ಮೊಸರು ಮಿಶ್ರಣ ಮಾಡಿ 15 ನಿಮಿಷ ಮುಖಕ್ಕೆ ಹಚ್ಚಿ. ನಂತರ ತೊಳೆಯಿರಿ. ಮೊಡವೆ ಮತ್ತು ಕಾಂತಿಗೆ ಉಪಯುಕ್ತ.
  4. ತೆಂಗಿನ ಎಣ್ಣೆಯಲ್ಲಿ ಮಂಜಿಷ್ಠ ಕುದಿಸಿ ಎಣ್ಣೆಯನ್ನು ತಯಾರಿಸಬಹುದು. ತಲೆಹೊಟ್ಟು ಮತ್ತು ಕೂದಲು ಬೆಳವಣಿಗೆಗೆ ಒಳ್ಳೆಯದು. ಮುಖಕ್ಕೂ ಕೂಡ ಹಚ್ಚಬಹುದು.

ಆಯುರ್ವೇದ ಔಷಧಗಳು – ಮಂಜಿಷ್ಠಾದಿ ಕ್ವಾಥ, ಮಂಜಿಷ್ಠಾದಿ ಚೂರ್ಣ, ಆರೋಗ್ಯವರ್ಧಿನಿ ವಟಿ, ಖದಿರಾರಿಷ್ಟ, ಮಹಾಮಂಜಿಷ್ಠಾದಿ ಕ್ವಾಥ

ಎಚ್ಚರಿಕೆ –
ಯಾವುದೇ ಔಷಧಿಯಂತೆ ಇದಕ್ಕೂ ಕೆಲವು ನಿಯಮಗಳಿವವೆ. ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬೇಡಿ.ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ವೈದ್ಯರ ಸಲಹೆ ಇಲ್ಲದೆ ಬಳಸಬಾರದು. ಅತಿಯಾದರೆ ವಾಂತಿ, ಅತಿಸಾರ, ಹೊಟ್ಟೆ ನೋವು ಬರಬಹುದು.















































































error: Content is protected !!
Scroll to Top