ನೀರನ್ನು ಹೇಗೆ ಸೇವಿಸಬೇಕು

ಜೀವಿಸಲು ನೀರು ಎಷ್ಟು ಮುಖ್ಯವೋ, ನೀರನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಸೇವಿಸುವುದು ಅಷ್ಟೇ ಮುಖ್ಯ.
ಪ್ರಾಚೀನ ಕಾಲದಲ್ಲಿ ನದಿಯ ನೀರು, ಮಳೆಯ ನೀರು ಆರೋಗ್ಯದಾಯಕ ಹಾಗೂ ಶುದ್ಧ ಎಂದು ಪರಿಗಣಿಸಲಾಗುತ್ತಿತ್ತು .ಆದರೆ ಈಗಿನ ಕಾಲದಲ್ಲಿ ಅದು ಹಿತವಲ್ಲವೆನ್ನಬಹುದು.

ಯಾರು ನೀರನ್ನು ಅಧಿಕವಾಗಿ ಸೇವಿಸಬಾರದು
ಅರುಚಿ, ಅಜೀರ್ಣ ಸಮಸ್ಯೆ ಇರುವವರು, ಉದರದಲ್ಲಿ ಗೆಡ್ಡೆ, ರಕ್ತಹೀನತೆ, ಅತಿಸಾರ, ಮೂಲವ್ಯಾಧಿ, ಮಲಬದ್ಧತೆ, ಡಯಾಬಿಟಿಸ್ (ಸಕ್ಕರೆ ಕಾಯಿಲೆ) ಜ್ವರ, ಕಣ್ಣಿನ ರೋಗ, ತ್ವಚೆಯ ರೋಗ, ಅಲ್ಸರ್ ಇರುವವರು ಅಧಿಕ ನೀರು ಕುಡಿಯಬಾರದು.
ಬೇಸಿಗೆ ಹಾಗೂ ವಸಂತ ಕಾಲವನ್ನು ಬಿಟ್ಟು ಬೇರೆಲ್ಲಾ ಋತುವಿನಲ್ಲಿ ಅಧಿಕ ನೀರನ್ನು ಸೇವಿಸುವುದು ಹಿತಕರವಲ್ಲ.

ನೀರು ಕುಡಿಯುವ ಸಮಯ
ಊಟದ ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭಗೊಳ್ಳುವುದು. ಊಟದ ನಂತರ ಕಫ ಅಧಿಕವಿರುವುದರಿಂದ ಆ ಸಮಯವಲ್ಲಿ ನೀರು ಕುಡಿಯುವುದರಿಂದ ಕಫ ವೃದ್ಧಿಗೊಳ್ಳುವುದರಿಂದ ಬೊಜ್ಜಿಗೆ ಕಾರಣವಾಗುತ್ತದೆ. ಊಟಕ್ಕಿಂತ ಮುಂಚಿತವಾಗಿ ನೀರು ಕುಡಿದರೆ ಜಠರಾಗ್ನಿ ಮಂದಗೊಳ್ಳುವುದರಿಂದ ಅಜೀರ್ಣದ ಸಮಸ್ಯೆ ತೋರುವುದು .

ತಣ್ಣೀರನ್ನು ಯಾವಾಗ ಸೇವಿಸಬಾರದು
ವಾತರೋಗ, ರೈನೈಟಿಸ್, ಗಂಟಲು ನೋವು, ಜ್ವರ, ಬಿಕ್ಕಳಿಕೆ ಇರುವಾಗ ಮತ್ತು ಪಂಚಕರ್ಮ ಮಾಡುವ ದಿನಗಳಲ್ಲಿ ತಣ್ಣೀರನ್ನು ಸೇವಿಸಬಾರದು .

ತಣ್ಣೀರು ಕುಡಿಯುವುದರಿಂದ ಲಾಭಗಳು
ಬಳಲಿಕೆ, ಬಲಹೀನತೆ, ವಾಕರಿಕೆ, ನಿಶ್ಯಕ್ತಿ, ತಲೆತಿರುಗುವಿಕೆ, ಬಾಯಾರಿಕೆ, ದಾಹ, ರಕ್ತಸ್ರಾವದ ಪರಿಸ್ಥಿತಿಗಳಲ್ಲಿ ತಣ್ಣೀರು ಸೇವಿಸುವುದು ಹಿತಕರ.

ಬಿಸಿನೀರು ಕುಡಿಯುವುದರಿಂದ ಲಾಭಗಳು
ಹಸಿವನ್ನು ಉತ್ತೇಜಿಸುತ್ತದೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಗಂಟಲಿಗೆ ಹಿತಕರ, ಮೂತ್ರಪಿಂಡವನ್ನು ಶುದ್ಧಗೊಳಿಸುತ್ತದೆ. ಬಿಕ್ಕಳಿಕೆಯನ್ನು ನಿವಾರಿಸುತ್ತದೆ. ವಾತ ಹಾಗೂ ಕಫದ ಅಸಮತೋಲನವನ್ನು ಸರಿಪಡಿಸುತ್ತದೆ. ಜ್ವರ, ಶೀತ, ಕೆಮ್ಮು, ಅಜೀರ್ಣ, ರೈನೈಟಿಸ್, ದೀರ್ಘಕಾಲದ ಉಸಿರಾಟದ ತೊಂದರೆಗಳಲ್ಲಿ ಬಿಸಿ ನೀರು ಸೇವಿಸುವುದು ಉತ್ತಮ.

ಬಿಸಿಮಾಡಿ ಆರಿಸಿದ ನೀರು ಪಿತ್ತವನ್ನು ಕಡಿಮೆಗೊಳಿಸುತ್ತದೆ. ಇದನ್ನು 1 ದಿವಸ ಮಾತ್ರ ಸಂಗ್ರಹಿಸಿ ಇಡಬೇಕು. ಪಿತ್ತ ಪ್ರಕೃತಿಯ ವ್ಯಕ್ತಿ (ಯಾರಿಗೆ ಶಾಖವನ್ನು ಸಹಿಸಿಕೊಳ್ಳಲು ಕಷ್ಟವಾಗುವುದೊ) ಹಾಗೂ ವಾತಪ್ರಕೃತಿ (ತೆಳ್ಳಗಿರುವವರು) ಯವರು ರಾತ್ರಿ ಬಿಸಿ ನೀರು ಕುಡಿಯಿರುವುದರಿಂದ ನಿದ್ದೆ ಏರುಪೇರಾಗುತ್ತದೆ. ಕಫಪ್ರಕೃತಿ (ಬೊಜ್ಜು ಇರುವವರು)ಯವರು, ಶ್ವಾಸಕೋಶದ ಉಸಿರಾಟದ ತೊಂದರೆ ಇದ್ದವರಲ್ಲಿ ಬಿಸಿ ನೀರು ಆರೋಗ್ಯದಾಯಕ.

ನೀರಿನ ಸಂಗ್ರಹಣೆ
ಮಣ್ಣಿನ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕರ. ಅಜೀರ್ಣ ಸಮಸ್ಯೆ ಇರುವವರು 2 ಚಿಟಿಕೆ ಜೀರಿಗೆ ಪುಡಿ 5 ಲೀಟರ್ ನೀರಿನಲ್ಲಿ ಹಾಕಿಡಿರಿ. ಅಜೀರ್ಣ ಸಮಸ್ಯೆ ಇರುವವರು ಈ ನೀರನ್ನು ಸೇವಿಸಿದರೆ ಒಳ್ಳೆಯದು.
1 ಚಮಚ ಕೊತಂಬರಿ ಬೀಜವನ್ನು ಪುಡಿ ಮಾಡಿ 1 ಗ್ಲಾಸ್‌ ನಿರಿನಲ್ಲಿ ಹಾಕಿ 4 ಗಂಟೆಗಳ ಕಾಲ ಇಟ್ಟು ನಂತರ ಸೊಸಿ ಕುಡಿಯುವುದರಿಂದ ಪಿತ್ತ ಶಮನಗೊಳ್ಳುತ್ತದೆ.
ತಾಮ್ರ ಹಾಗೂ ರಜತದ ಪಾತ್ರೆಯಲ್ಲಿ ಇಟ್ಟ ನೀರನ್ನು ಸೇವಿಸುವದರಿಂದ ಆರೋಗ್ಯ ಸಮತೋಲನದಲ್ಲಿರುತ್ತದೆ.
ಲಾವಂಚದ ಬೇರು ಹಾಕಿ ನೀರನ್ನು ಸೇವಿಸುವುದರಿಂದ ಮೂತ್ರ ಪಿಂಡವೂ ಶುದ್ಧಗೊಳ್ಳುತ್ತದೆ. ಈ ನೀರನ್ನು ಹನ್ನೆರಡು ಗಂಟೆಗಿಂತ ಅಧಿಕ ಸಮಯ ಇಡಬಾರದು. ನೀರನ್ನು 12 ಗಂಟೆಗೊಮ್ಮೆ ಬದಲಿಸಬೇಕು .
ಉಷಾಕಾಲದಲ್ಲಿ ಅಂದರೆ ಮುಂಜಾನೆ ಖಾಲಿ ಹೊಟ್ಟೆ ನೀರು ಕುಡಿಯುವುದರಿಂದ ಕಣ್ಣಿಗೆ ಹಿತಕರ. ಕಣ್ಣಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ತ್ವಚೆಯ ಸುಕ್ಕು, ಬೂದು ಕೂದಲು ಇದ್ದವರಿಗೆ ಲಾಭದಾಯಕ.

ನೆನಪಿರಲಿ
ಬಾಯಾರಿಕೆಯಾದಾಗ ಮಾತ್ರ ನೀರನ್ನು ಸೇವಿಸಿರಿ.
ಕುಳಿತು ನೀರನ್ನು ಸೇವಿಸಿರಿ.
ಬಾಯಾರಿಕೆಯಾದಾಗ ಆಹಾರವನ್ನು ಸೇವಿಸಕೂಡದು ಹಾಗು ಹಸಿವಾದಾಗ ನೀರು ಕುಡಿಯ ಬಾರದು ಇದು ಆರೋಗ್ಯದಾಯಕವಲ್ಲ.
ಪಿತ್ತಕಾಲದಲ್ಲಿ ಅಂದರೆ ಬೇಸಿಗೆ ಸಮಯದಲ್ಲಿ ಹಾಗೂ ದಿನದಲ್ಲಿ ಮಧ್ಯಾಹ್ನದಲ್ಲಿ ಅಧಿಕ ನೀರು ಕುಡಿಯಬೇಕು.









































































































error: Content is protected !!
Scroll to Top