ಹೆಬ್ರಿ : ಮುದ್ರಾಡಿ ಗ್ರಾಮದ ಬಲ್ಲಾಡಿ ದರ್ಖಾಸು ಜಂಕ್ಷನ್ ಬಳಿ ತಂಡವೊಂದು ಮುದ್ರಾಡಿ ಗ್ರಾಮದ ಸುನಿಲ್ (32) ಎಂಬ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ಶುಕ್ರವಾರ ಸಂಭವಿಸಿದೆ. ರಾತ್ರಿ 7.15ರ ವೇಳೆ ಸುನಿಲ್ ಸ್ನೇಹಿತರ ಜತೆ ಮಾತನಾಡುತ್ತಿದ್ದಾಗ ಜೀಪು ಮತ್ತು ಬೈಕ್‌ನಲ್ಲಿ ಬಂದ ಚಂದ್ರ, ದಿವಾಕರ, ಮಂಜುನಾಥ ಮತ್ತು ಪ್ರವೀಣ ಎಂಬವರು ಹಲ್ಲೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಸುನಿಲ್ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಾರಿಯಿಂದ ಬಿದ್ದು ಕಾರ್ಮಿಕನಿಗೆ ಗಾಯ
ಹೆಬ್ರಿ : ಲಾರಿಗೆ ಟರ್ಪಾಲು ಕಟ್ಟುತ್ತಿರುವಾಗ ಕೂಲಿ ಕಾರ್ಮಿಕ ಬಿದ್ದು ಗಾಯಗೊಂಡ ಘಟನೆ ಬ್ರಹ್ಮಾವರದ ಕಳ್ತೂರಿನ ಸಂತೆಕಟ್ಟೆಯಲ್ಲಿರುವ ವಾಸುಕಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಸಂಭವಿಸಿದ್ದು, ಈ ಕುರಿತು ಲಾರಿಯ ಮಾಲಕ ಆಸಿಫ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗದಗ ಮೂಲದ ಜೀವನ್ ಸಾಬ್ ಎಂಬವರು ಆಸಿಫ್ ಮಾಲೀಕತ್ವದ ಲಾರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಮಾ. 26ರಂದು ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಹಿಂಡಿ ಲೋಡ್ ಮಾಡಿ ಮೇಲೆ ಟರ್ಪಾಲು ಕಟ್ಟುತ್ತಿದ್ದಾಗ ಜೀವನ್ ಸಾಬ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಲೀಕ ಆಸಿಫ್ ಕಾರ್ಮಿಕರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅವಘಡಕ್ಕೆ ಕಾರಣ ಎಂದು ಜೀವನ್ ಸಾಬ್‌ರ ಪತ್ನಿ ಜಬಿನಾ ಬಾನು ಹೆಬ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




