ಮಾಳ ಗುರುಕುಲ ಶಾಲೆಯಲ್ಲಿ ಯುಕೆಜಿ ಮಕ್ಕಳ ಪದವಿ ಪ್ರದಾನ

ಕಾರ್ಕಳ : ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಯುಕೆಜಿ ಮಕ್ಕಳ ಪದವಿ ಪ್ರದಾನ ಕಾರ್ಯಕ್ರಮ ಇತ್ತೀಚಿಗೆ ಜರುಗಿತು.
ಮಕ್ಕಳಿಗೆ ಪೇಟ ಶಾಲು ಹಾಕಿ ಪ್ರಮಾಣ ಪತ್ರ ನೀಡಿ ಪದವಿ ಪ್ರದಾನ ಮಾಡಲಾಯಿತು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಜಾನನ ಮರಾಠೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಧಾಕರ್ ಡೊಂಗ್ರೆ, ಕಮಲಾಕ್ಷ ಕಾಮತ್, ತಾರಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗಭೂಷಣ ಮರಾಠೆ, ರಾಮ ಸೇರಿಗಾರ, ರಘುಪತಿ ಕಾಮತ್ ಮತ್ತು ರವೀಂದ್ರನಾಥ ಜೋಶಿ ಉಪಸ್ಥಿತರಿದ್ದರು. ಶಿಕ್ಷಕಿ ವಸಂತಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ರಕ್ಷಿತಾ ಕಾರ್ಯಕ್ರಮ ನಿರೂಪಿಸಿ, ಜ್ಯೋತಿ ವಂದಿಸಿದರು. ಶೋಭಾ ಕಾರ್ಯಕ್ರಮ ಸಂಯೋಜಿಸಿದರು.









































































































error: Content is protected !!
Scroll to Top